alex Certify ಥೈರಾಯ್ಡ್ ಸಮಸ್ಯೆ ನಿವಾರಿಸಲು ಸಹಾಯಕ ಈ ಯೋಗಾಸನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಸಮಸ್ಯೆ ನಿವಾರಿಸಲು ಸಹಾಯಕ ಈ ಯೋಗಾಸನ

ಜೀವನಶೈಲಿ ಹಾಗೂ ಆಹಾರದಲ್ಲಿನ ವ್ಯತ್ಯಾಸದಿಂದ ಹಲವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹಾಗಾಗಿ ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸಲು ಮತ್ತು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಪ್ರತಿದಿನ ಈ ಯೋಗಾಸನಗಳನ್ನು ಪ್ರಯತ್ನಿಸಿ.

*ಧನುರಾಸನ : ಇದು ಥೈರಾಯ್ಡ್ ಗ್ರಂಥಿಯನ್ನು ಮಸಾಜ್ ಮಾಡುವ ಮೂಲಕ ಸಹಾಯ ಮಾಡುತ್ತದೆ. ಇದು ಥೈರಾಯ್ಡ್ ಚಿಕಿತ್ಸೆಗೆ ಸಹಾಯ ಮಾಡುವ ಹಾರ್ಮೋನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

*ಸರ್ವಂಗಾಸನ : ಇದು ಭುಜದ ಬೆಂಬಲದಿಂದ ತಲೆಕೆಳಗಾಗಿರುವುದರಿಂದ ಇದು ಗಂಟಲಿಗೆ ನೇರ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಹೈಪೋಥೈರಾಯ್ಡ್ ಸಮಸ್ಯೆಗಳಿಗೆ ಪ್ರಯೋಜನಕಾರಿ ಯೋಗಾಸನವಾಗಿದೆ.

*ಭುಜಂಗಾಸನ : ಇದು ಕುತ್ತಿಗೆ ಮತ್ತು ಗಂಟಲನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಲು ಸಹಕಾರಿ.

*ಮತ್ಸ್ಯಾಸನ : ಇದು ಥೈರಾಯ್ಡ್ ಗ್ರಂಥಿಗಳಿಗೆ ಹೆಚ್ಚಿನ ರಕ್ತ ಹರಿಯುವಂತೆ ಸಹಾಯ ಮಾಡುತ್ತದೆ. ಇದು ಗಂಟಲು ಮತ್ತು ಕುತ್ತಿಗೆಯನ್ನು ವಿಸ್ತರಿಸುವುದರ ಮೂಲಕ ಹೈಪೋಥೈರಾಯ್ಡಿಸಮ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...