alex Certify ಶಿಕ್ಷಣದ ವೆಚ್ಚ ಭರಿಸಲು KFC ರೈಡರ್​ ಆಗಿ ನೈಟ್​ ಡ್ಯೂಟಿ ಮಾಡ್ತಾಳೆ ಪಾಕಿಸ್ತಾನದ ಈ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣದ ವೆಚ್ಚ ಭರಿಸಲು KFC ರೈಡರ್​ ಆಗಿ ನೈಟ್​ ಡ್ಯೂಟಿ ಮಾಡ್ತಾಳೆ ಪಾಕಿಸ್ತಾನದ ಈ ಯುವತಿ…!

ಫುಡ್​ ಡೆಲಿವರಿ ಕ್ಷೇತ್ರ ಪ್ರಪಂಚದಾದ್ಯಂತ ಯುವಕರಿಗೆ ಉದ್ಯೋಗ ನೀಡಿದೆ. ಇತ್ತೀಚೆಗೆ ಮಹಿಳೆಯರೂ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ರಾತ್ರಿ ವೇಳೆ ಯುವತಿಯೊಬ್ಬರು ಫುಡ್​ ಡೆಲಿವರಿ ಮಾಡಿ ಸುದ್ದಿಯಾಗಿದ್ದಾರೆ. ವಿಶೇಷಗಳಲ್ಲಿ ವಿಶೇಷವೆಂದರೆ ಈ ಪ್ರಸಂಗ ನಡೆದಿರುವುದು ಪಾಕಿಸ್ತಾನದಲ್ಲಿ.

ಫೈಜಾ ಇಜಾಜ್​ ಎಂಬುವರು ಆ ಮಹಿಳಾ ಡೆಲಿವರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಆಕೆ ರಾತ್ರಿಯಲ್ಲಿ ಹತ್ತಿರದ ಕೆ ರುರಿಗೆ ಆಶ್ಚರ್ಯಚಕಿತರಾಗಿ ಆ ಧೈರ್ಯಶಾಲಿಯನ್ನು ಭೇಟಿಯಾಗಲು ಧಾವಿಸಿದ್ದಾರೆ.

“ನಾನು ತುಂಬಾ ಉತ್ಸುಕಳಾಗಿ ಆಕೆಯನ್ನು ಬರಮಾಡಿಕೊಳ್ಳಲು ಗೇಟ್​ನ ಹೊರಗೆ ನಿಂತಿದ್ದೆ. ನಾನು ನನ್ನ ಸ್ನೇಹಿತರು ಆಕೆಯನ್ನು ನೋಡಲು ಕಾತರದಿಂದ ಕಾಯ್ದಿದ್ದೆವು. ಆ ರೈಡರ್​ ಬಂದ ನಂತರ ಆಕೆಯ ಉತ್ಸಾಹ ಮತ್ತು ಬೈಕ್​ ಸವಾರಿ ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ 10 ನಿಮಿಷಗಳ ಕಾಲ ಮಾತನಾಡಿದೆವು’ ಎಂದು ಆಕೆಯ ಫೋಟೋದೊಂದಿಗೆ ಫೈಜಾ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮೀರಾಬ್​ ಹೆಸರಿ ಈ ಕೆಎಫ್‌ಸಿ ರೈಡರ್​ ಫ್ಯಾಷನ್​ ಡಿಸೈನ್​ ಅಭ್ಯಾಸ ನಡೆಸುತ್ತಿದ್ದು, ತನ್ನ ಶಿಕ್ಷಣದ ವೆಚ್ಚ ಮತ್ತು ಅವಳ ದೈನಂದಿನ ಖರ್ಚುಗಳನ್ನು ಪೂರೈಸಲು ಡೆಲಿವರಿ ಏಜೆಂಟ್​ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದಳು ಎಂಬುದನ್ನು ವಿವರಿಸಿದ್ದಾರೆ.

ಆಕೆ ತನ್ನ ಸ್ವಂತ ಫ್ಯಾಶನ್​ ಬ್ರಾಂಡ್ ​ಅನ್ನು ರೂಪಿಸಲು ಯೋಜಿಸಿದ್ದು, ತಾನು ಪದವಿ ಪಡೆಯುವವರೆಗೆ ಇನ್ನೂ 3 ವರ್ಷಗಳ ಕಾಲ ಕೆಎಫ್‌ಸಿ ರೈಡರ್​ ಆಗಿ ಉಳಿಯಲು ಉದ್ದೇಶಿಸಿದ್ದಾಳೆ. ಈ ಪೋಸ್ಟ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆ ಬಂದಿದೆ.

No alternative text description for this image

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...