alex Certify ಇದು ಮೆಟ್ರೋ ಲವ್‌ ಸ್ಟೋರಿ: ಪತಿ – ಪತ್ನಿ ಸೆಲ್ಫಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಮೆಟ್ರೋ ಲವ್‌ ಸ್ಟೋರಿ: ಪತಿ – ಪತ್ನಿ ಸೆಲ್ಫಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್

ಪ್ರೀತಿ ಎನ್ನುವುದು ಮಾಯೆ, ಆ ಮಾಯೆ ಇಲ್ಲದೆ ಬದುಕಿಲ್ಲ…… ಬದುಕು ಸುಂದರವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮ ಸುತ್ತಲೂ ಸದಾ ಆವರಿಸಿಕೊಂಡಿರಬೇಕು. ನಿಜ, ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಿರುತ್ತಾನೆ. ನಮಗಾಗಿ ಒಂದು ಜೀವ ಇದೆ ಅನ್ನೋ ಭಾವನೆ ಇದ್ದರೆನೇ ಸಾಕು, ಅದೇ ಒಂದು ಅದ್ಭುತ ಅನುಭವ ನೀಡುತ್ತೆ. ಅದೇ ರೀತಿಯ ಪ್ರೀತಿಯಿಂದ ಕೂಡಿದ ಅದ್ಭುತ ಕ್ಷಣಗಳ ದೃಶ್ಯವೊಂದು ಇತ್ತೀಚೆಗೆ ದೆಹಲಿಯ ಮೆಟ್ರೋ ರೈಲಿನಲ್ಲಿ ನೋಡಲು ಸಿಕ್ಕಿತ್ತು.

ಅದು ದೆಹಲಿಯ ಮೆಟ್ರೋ ರೈಲು….. ಎಂದಿನಂತೆ ಜನರಿಂದ ಕಿಕ್ಕಿರಿದು ತುಂಬಿತ್ತು. ಅದೇ ರೈಲಿನ ಮೂಲೆಯೊಂದರಲ್ಲಿ ಮಧ್ಯಮ ವಯಸ್ಸಿನ ಗಂಡ-ಹೆಂಡತಿ ಕೂತಿದ್ದರು. ಗಂಡ ತನ್ನ ಜೇಬಿನಲ್ಲಿದ್ದ ಮೊಬೈಲ್‌ನಿಂದ ಹೆಂಡತಿಯೊಂದಿಗೆ ಸೆಲ್ಪಿ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾನೆ. ಹೆಂಡತಿ, ಗಂಡ ಸೆಲ್ಪಿ ತೆಗೆದುಕೊಳ್ಳೋದು ಗೊತ್ತಾದ ತಕ್ಷಣ ಹಾಕಿದ್ದ ಕನ್ನಡಕ ತೆಗೆದು, ಸೆರಗನ್ನ ಸರಿ ಮಾಡಿಕೊಂಡು ಸೆಲ್ಫಿಗೆ ಪೋಸ್ ಕೊಡುತ್ತಾಳೆ.

ಅಲ್ಲೇ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕ ಅವರ ಸೆಲ್ಫಿ ಫೋಟೋವಿನ ವಿಡಿಯೋವನ್ನ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ಮನಸ್ಸಿಗೂ ಇಷ್ಟವಾಗುವಂತಿದೆ ಈ ಜೋಡಿಯ ಸೆಲ್ಫಿ ವಿಡಿಯೋ.

ಈ ವಿಡಿಯೋದ ಇನ್ನೂ ಒಂದು ಸ್ಪೆಷಾಲಿಟಿ ಏನಂದ್ರೆ, ಆ ಮೊಬೈಲ್‌ನಲ್ಲಿ ಸೆಲ್ಪಿ ಕ್ಯಾಮರಾ ಸಮಸ್ಯೆ ಇರುತ್ತೆ. ಆ ಕಾರಣಕ್ಕಾಗಿ, ಆ ಮೊಬೈಲ್‌ನ್ನ ಉಲ್ಟಾ ಹಿಡಿದೇ ಮೊಬೈಲ್ ಕ್ಲಿಕ್ ಬಟನ್ ಒತ್ತುತ್ತಾನೆ ಗಂಡ.

ಮಿಸ್ಟರ್ ಮ್ಯಾಥ್ಯೂ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿ ಹಾರ್ಟ್ ಸಿಂಬಲ್ ಹಾಕಿದ್ದಾರೆ. ಈಗಾಗಲೇ ಈ ವಿಡಿಯೋ ವೈರಲ್ ಆಗಿದ್ದು 7 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಕೆಲವೇ ಕೆಲವು ಕ್ಷಣದ ವಿಡಿಯೋ ನೋಡಿ ಜನರು ಎಂಜಾಯ್ ಮಾಡುತ್ತಿದ್ದು, ಫನ್ನಿ ಫನ್ನಿ ಕಾಮೆಂಟ್ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...