alex Certify ವೆಡ್ಡಿಂಗ್ ಕಾರ್ಡ್‌ನಲ್ಲಿ ಅಖಿಲೇಶ್, ಮುಲಾಯಂ ಸಿಂಗ್ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಡ್ಡಿಂಗ್ ಕಾರ್ಡ್‌ನಲ್ಲಿ ಅಖಿಲೇಶ್, ಮುಲಾಯಂ ಸಿಂಗ್ ಫೋಟೋ…!

ಉತ್ತರ ಪ್ರದೇಶದಲ್ಲಿ ಚುನಾವಣಾ ಜ್ವರ ಆರಂಭವಾಗಿದೆ.
ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲೂ ರಾಜಕೀಯ ನುಸುಳುತ್ತಿದೆ‌. ಇದಕ್ಕೊಂದು ಉದಾಹರಣೆ ಎಂಬಂತೆ ಪ್ರತಾಪ್‌ಗಢ್ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ಕಾರ್ಡ್‌ಗೆ ರಾಜಕೀಯ ಸ್ಪರ್ಶ ನೀಡಿದ್ದಾನೆ.

ಅಭಿಷೇಕ್ ಅವರ ವಿವಾಹದ ಆಮಂತ್ರಣ ಪತ್ರಿಕೆಯು ಸಮಾಜವಾದಿ ಪಕ್ಷ ಬಳಸುವ ಬಣ್ಣಗಳಾದ ಹಸಿರು ಮತ್ತು ಕೆಂಪು ಬಣ್ಣಗಳಲ್ಲಿ ಮುದ್ರಿಸಲ್ಪಟ್ಟಿದೆ ಮತ್ತು ಆ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಛಾಯಾಚಿತ್ರಗಳನ್ನು ಬಳಸಲಾಗಿದೆ.

ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಪತ್ರಿಕೆಯ ಒಳಭಾಗದಲ್ಲಿ ಸ್ಥಳೀಯ ಎಸ್ಪಿ ನಾಯಕರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಆಮಂತ್ರಣ ಪತ್ರಿಕೆಯ ಕೊನೆಯ ಪುಟದಲ್ಲಿ ಅಖಿಲೇಶ್ ಸರ್ಕಾರದ ಸಾಧನೆಗಳ ಜೊತೆಗೆ “ಕಾಮ್ ಬೋಲ್ತಾ ಹೈ” ಎಂಬ ಸ್ಲೋಗನ್ ಸಹ ಮುದ್ರಿಸಲಾಗಿದೆ. ಅಖಿಲೇಶ್ ಆಡಳಿತದಲ್ಲಿ ಪೂರ್ಣಗೊಂಡ ಯೋಜನೆಗಳ ಛಾಯಾಚಿತ್ರಗಳನ್ನೂ ಹಾಕಲಾಗಿದೆ.

ನವೆಂಬರ್ 20ರಂದು ಮದುವೆ ನಿಗದಿಯಾಗಿದ್ದು ಅಭಿಷೇಕ್ 400 ಕ್ಕೂ ಹೆಚ್ಚು ಕುಟುಂಬಕ್ಕೆ ಆಹ್ವಾನ ಕಳುಹಿಸಿದ್ದಾರೆ. ನಾವು ಕೆಲವು ಸ್ಥಳೀಯ ಬಿಜೆಪಿ ಬೆಂಬಲಿಗರನ್ನು ಸಹ ಆಹ್ವಾನಿಸಿದ್ದೇವೆ ಮತ್ತು ಅವರು ನಗುವಿನೊಂದಿಗೆ ಕಾರ್ಡ್ ಅನ್ನು ಸ್ವೀಕರಿಸಿದರು ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...