alex Certify ALERT : ಮಕ್ಕಳನ್ನು ಮತ್ತೆ ಕಾಡುತ್ತಿದೆ ಈ ವಿಚಿತ್ರ ಚರ್ಮರೋಗ : ಪೋಷಕರಲ್ಲಿ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಮಕ್ಕಳನ್ನು ಮತ್ತೆ ಕಾಡುತ್ತಿದೆ ಈ ವಿಚಿತ್ರ ಚರ್ಮರೋಗ : ಪೋಷಕರಲ್ಲಿ ಆತಂಕ

ಚಾಮರಾಜನಗರ : ಮದ್ರಾಸ್ ಐ ರೋಗದ ಭೀತಿ ನಡುವೆಯೇ ಮಕ್ಕಳಲ್ಲಿ ವಿಚಿತ್ರ ಚರ್ಮರೋಗ ಕಾಣಿಸಿಕೊಂಡಿದ್ದು, ಪೋಷಕರು ಆತಂಕಗೊಂಡಿದ್ದಾರೆ. ಕೈ ಕಾಲು, ಮುಖದ ಮೇಲೆ ಕಪ್ಪು ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುವ ರೋಗಕ್ಕೆ ಚುಕ್ಕಿ ಚರ್ಮರೋಗ ಎನ್ನಲಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ ಗ್ರಾಮಗಳಲ್ಲಿ ಈ ಚರ್ಮರೋಗ ಮಕ್ಕಳನ್ನು ಕಾಡುತ್ತಿದೆ. ಇದರಿಂದ ಮಕ್ಕಳಲ್ಲಿ ದೃಷ್ಟಿದೋಷ ಹಾಗೂ ಶ್ರವಣದೋಷ ಸಮಸ್ಯೆ ಉಂಟಾಗುತ್ತಿದೆ. ಮಕ್ಕಳಿಗೆ 9 ವರ್ಷ ತುಂಬಿದ ನಂತರ ಚರ್ಮದಲ್ಲಿ ಹುಣ್ಣು, ಬಿಳಿ ಮಚ್ಚೆ, ಚರ್ಮ ಕಪ್ಪು ಬಣ್ಣಕ್ಕೆ ತಿರುಗುವುದು, ಕಣ್ಣು ಊದಿಕೊಳ್ಳುವಿಕೆ ಈ ರೀತಿ ನಾನಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಿನ್ನೆಲೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದ್ದಾರೆ. ಹನೂರು ತಾಲೂಕಿನಲ್ಲಿ ಈ ವಿಚಿತ್ರ ಕಾಯಿಲೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರಿಗೆ ಇದು ಸವಾಲಾಗಿ ಪರಿಣಮಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...