alex Certify ಅಮ್ಮನಿಗೆ ಮದುವೆ ಮಾಡಿಸಿದ ಮಗಳು; ಹೃದಯಸ್ಪರ್ಶಿ ಪೋಸ್ಟ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನಿಗೆ ಮದುವೆ ಮಾಡಿಸಿದ ಮಗಳು; ಹೃದಯಸ್ಪರ್ಶಿ ಪೋಸ್ಟ್ ವೈರಲ್

ಇಳಿವಯಸ್ಸಿನ ತಾಯಿಗೆ ಮಗಳು ಮದುವೆ ಮಾಡಿಸಿರೋ ಹೃದಯ ಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಹ್ಯೂಮನ್ಸ್ ಆಫ್ ಬಾಂಬೆಯ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು ಹಂಚಿಕೊಂಡಿದ್ದು ಕಥೆಯಲ್ಲಿ ದೇಬ್ ಆರ್ತಿ ರಿಯಾ ಚಕ್ರವರ್ತಿ ಮತ್ತು ಅವರ ತಾಯಿ ಮೌಶುಮಿಯೇ ನಾಯಕಿಯರು.

ದೇಬ್ ಆರ್ತಿ ರಿಯಾ ಚಕ್ರವರ್ತಿ ತನ್ನ ತಾಯಿ ಸಂತೋಷದಿಂದಿರಲು ಏನು ಮಾಡಿದರು ಎಂಬುದನ್ನು ವಿವರಿಸುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ.

“ಕಳೆದ ವರ್ಷ, ಒಂದು ಸಂಜೆ ನನ್ನ ಚಿಕ್ಕಮ್ಮನಿಂದ ನನಗೆ ಕರೆ ಬಂತು. ಅವರು ಹೇಳಿದರು, ‘ನಿಮ್ಮ ತಾಯಿಯನ್ನು ಇಷ್ಟಪಡುವ ಒಬ್ಬ ವ್ಯಕ್ತಿ ಇದ್ದಾನೆ.’ ಆಗ ನಾನು ಉತ್ಸುಕಳಾಗಿದ್ದೆ. ನನ್ನ ಅಮ್ಮ ಮತ್ತೆ ಪ್ರೀತಿಯನ್ನು ಕಂಡುಕೊಂಡಿದ್ದನ್ನು ನಾನು ಇಷ್ಟಪಟ್ಟೆ, ”ಎಂಬ ಶೀರ್ಷಿಕೆಯಿಂದ ಕಥೆಯ ವಿವರ ಶುರುವಾಗುತ್ತದೆ.

ತನ್ನ ಗಂಡನ ಮರಣದ ನಂತರ ದೇಬ್ ಆರ್ತಿ ರಿಯಾ ಚಕ್ರವರ್ತಿಯ ತಾಯಿ ತನ್ನ ಜೀವನದಲ್ಲಿ ಮತ್ತೊಬ್ಬರಿಗೆ ತನ್ನ ಹೃದಯದಲ್ಲಿ ಸಂಗಾತಿಯಾಗಿ ಜಾಗ ನೀಡಲು ಎದುರಿಸಿದ ಮಾನಸಿಕ ಹಿಂಸೆಯನ್ನು ಪೋಸ್ಟ್ ವಿವರಿಸುತ್ತಾ ಹೋಗುತ್ತದೆ.

“ ನಮ್ಮ ತಂದೆಯ ಮರಣದ ನಂತರ ನಾವು ನಾನಿಯ ಮನೆಗೆ ತೆರಳಿದೆವು ಮತ್ತು ನಾನು ಅಲ್ಲಿಯೇ ಬೆಳೆದೆ. ನನಗೆ ಕೇವಲ 2 ವರ್ಷ ಮತ್ತು ಮಾಮಿಗೆ 25 ವರ್ಷ. ಈ ವೇಳೆ ಅಲ್ಲಿ ಎಲ್ಲರೂ, ನೀನು ಮರುಮದುವೆ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಆದರೆ ಅಮ್ಮ ನಿರಾಕರಿಸಿದಳು. ಮರುಮದುವೆಯಿಂದ ನಾನು ಪ್ರೀತಿಯನ್ನು ಕಂಡುಕೊಳ್ಳುತ್ತೇನೆ, ಆದರೆ ನನ್ನ ಮಗಳಿಗೆ ತಂದೆಯ ಪ್ರೀತಿ ಸಿಗುವುದಿಲ್ಲ ” ಎಂದು ತನ್ನ ತಾಯಿ ಹೇಳಿದ್ದಾಗಿ ಚಕ್ರವರ್ತಿ ಹೇಳಿದ್ದಾರೆ.

ಆನಂತರ ತನ್ನ ತಾಯಿಗೆ ಸಂಗಾತಿಯನ್ನು ಹುಡುಕಿ ಮದುವೆ ಮಾಡಿಸಿದ ದೇಬ್ ಆರ್ತಿ ರಿಯಾ ಚಕ್ರವರ್ತಿ “ಮಾ ನಿಮಗಾಗಿ ಒಬ್ಬ ಸಂಗಾತಿಯನ್ನು ಹುಡುಕಿದ್ದೇನೆ ಮತ್ತು ನಾನು ಕೂಡ ತಂದೆಯನ್ನು ಕಂಡುಕೊಂಡೆ” ಎಂದು ಚಕ್ರವರ್ತಿ ಹೇಳಿರೋದಾಗಿ ಪೋಸ್ಟ್ ನಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...