alex Certify Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಬಾಲಿವುಡ್​ ಹಾಡಿಗೆ ಕುರಿಗಾಹಿಗಳ ಅದ್ಭುತ ಸ್ಟೆಪ್ಸ್

ಪಾಕಿಸ್ತಾನಿ ಹುಡುಗಿಯೊಬ್ಬಳು ಬಾಲಿವುಡ್‌ನ ಕ್ಲಾಸಿಕ್ ಹಾಡಿಗೆ ಸ್ಟೆಪ್​ ಹಾಕಿ ಭಾರಿ ವೈರಲ್​ ಆಗಿದ್ದಳು. ಇದೀಗ ಅದನ್ನೇ ಕುರಿಗಾಹಿಗಳಿಬ್ಬರು ಅನುಸರಿಸಿದ್ದಾರೆ. ಕುರಿ ಕಾಯುತ್ತಿರುವ ಇಬ್ಬರು ವ್ಯಕ್ತಿಗಳು ಗೋವಿಂದ ನಟಿಸಿದ ಸೂಪರ್‌ಹಿಟ್ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಒಬ್ಬ ಬಾಲಕ ಹಾಗೂ ಒಬ್ಬ ಪುರುಷ ಮಾಡಿರುವ ಈ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಕುರಿಗಾಹಿ ದುಲ್ಹೆ ರಾಜ ಶೀರ್ಷಿಕೆ ಟ್ರ್ಯಾಕ್‌ಗೆ ಸಂತೋಷದಿಂದ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಮೂಲತಃ ಗೋವಿಂದ ಮತ್ತು ರವೀನಾ ಟಂಡನ್ ನಟಿಸಿದ ಈ ಹಾಡಿಗೆ ಗೋವಿಂದ ಕೆಲವು ಚಮತ್ಕಾರಿ ಚಲನೆಗಳನ್ನು ಮಾಡಿದ್ದು, ಅದರಂತೆಯೇ ಈ ವಿಡಿಯೋದಲ್ಲಿ ಮಾಡಿ ತೋರಿಸಲಾಗಿದೆ.

ಹಿಂದೆ ಕುರಿಮಂದೆ ಇದ್ದು, ಮುಂದೆ ಈ ನೃತ್ಯ ಮಾಡಲಾಗುತ್ತಿದ್ದು, ನೋಡಲು ಬಲು ಸೊಗಸಾಗಿದೆ. ಇದನ್ನು ಹಲವರು ಇಷ್ಟಪಟ್ಟು ಕಮೆಂಟ್​ ಮಾಡುತ್ತಿದ್ದಾರೆ. ಯಾರ್ಯಾರ ಒಳಗೆ ಯಾವ ರೀತಿಯ ಟ್ಯಾಲೆಂಟ್​ ಇರುತ್ತದೆ ಎಂದು ತಿಳಿಯುವುದೇ ಕಷ್ಟ ಎಂದು ಹಲವರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...