alex Certify ʼನೀರುʼ ಕುಡಿಯುವಾಗ ಮಾಡುವ ಈ ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಆಯಸ್ಸು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನೀರುʼ ಕುಡಿಯುವಾಗ ಮಾಡುವ ಈ ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಆಯಸ್ಸು….!

ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ವೃದ್ಧಾಪ್ಯವು ನಿಧಾನವಾಗಿ ಬರುತ್ತದೆ. ಅಷ್ಟೇ ಅಲ್ಲ ಅದರಿಂದ ಉಂಟಾಗುವ ಸಮಸ್ಯೆಗಳ ಅಪಾಯವೂ ಕಡಿಮೆಯಾಗುತ್ತದೆ. ನಾವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿದ್ದರೆ, ಹಳೆಯ ರೋಗಗಳು ಮತ್ತೆ ಹೊರಹೊಮ್ಮುವ ಸಾಧ್ಯತೆಗಳು ಸಹ ಕಡಿಮೆಯಾಗುತ್ತವೆ. ಸಂಶೋಧನೆಯೊಂದರ ಪ್ರಕಾರ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಾಗಿ ವ್ಯಕ್ತಿಯ ಜೀವಿತಾವಧಿಯು 15 ವರ್ಷಗಳವರೆಗೆ ಕಡಿಮೆಯಾಗುತ್ತದೆ.

ಸಂಶೋಧನೆಯ ಫಲಿತಾಂಶಗಳ ಪ್ರಕಾರ ಕಡಿಮೆ ನೀರು ಕುಡಿಯುವ ಅಭ್ಯಾಸ ವೃದ್ಧಾಪ್ಯದ ಆಗಮನವನ್ನು ವೇಗಗೊಳಿಸುತ್ತದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಕೆಲವು ಇಲಿಗಳಿಗೆ ಜೀವನದುದ್ದಕ್ಕೂ ಕಡಿಮೆ ನೀರನ್ನು ನೀಡಲಾಯಿತು. ಇದರಿಂದ ಆ ಇಲಿಗಳಲ್ಲಿ ಪ್ರತಿ ಲೀಟರ್‌ಗೆ ಸೋಡಿಯಂ ಪ್ರಮಾಣ ಐದು ಪಟ್ಟು ಹೆಚ್ಚಾಯ್ತು. ಅವುಗಳ ಆಯಸ್ಸು ಆರು ತಿಂಗಳು ಕಡಿಮೆಯಾಯ್ತು.

ಅದೇ ರೀತಿ ನೀರು ಕಡಿಮೆ ಕುಡಿಯುವುದರಿಂದ ಮನುಷ್ಯರ ಮೇಲೂ ಆಳವಾದ ಪರಿಣಾಮ ಉಂಟಾಗುತ್ತದೆ. ಇಲಿಗಳಿಗೆ ಹೋಲಿಸಿದರೆ ಮಾನವ ಜೀವಿತಾವಧಿ 15 ವರ್ಷಗಳಷ್ಟು ಕಡಿಮೆಯಾಗುತ್ತದೆ. ವೃದ್ಧಾಪ್ಯದ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಕ್ರಮಗಳನ್ನು ಕಂಡುಹಿಡಿಯುವುದು ವಿಜ್ಞಾನಿಗಳ ಮುಂದಿರುವ ಬಹುದೊಡ್ಡ ಸವಾಲು. ವಯಸ್ಸಿಗೆ ಸಂಬಂಧಿಸಿದ ರೋಗಗಳು ವೇಗವಾಗಿ ಹೊರಹೊಮ್ಮುತ್ತಿರುವ ಕಾರಣ ಇದು ಅವಶ್ಯಕವಾಗಿದೆ.

ಸಂಶೋಧನೆಯ ಪ್ರಕಾರ ಪ್ರತಿದಿನ ಸಾಕಷ್ಟು ಪ್ರಮಾಣದ ನೀರು ಕುಡಿಯುವುದರಿಂದ ಜೀವನವು ರೋಗಮುಕ್ತವಾಗಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ, ಇದರಿಂದ ವೃದ್ಧಾಪ್ಯವು ತಡವಾಗಿ ಬರುತ್ತದೆ. ತಾಪಮಾನವನ್ನು ನಿಯಂತ್ರಿಸಲು ಮತ್ತು ಚರ್ಮಕ್ಕೆ ಸಹ ನೀರು ಮುಖ್ಯವಾಗಿದೆ

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಪುರುಷರು ಪ್ರತಿದಿನ 3.7 ಲೀಟರ್ (11-12 ಗ್ಲಾಸ್) ನೀರನ್ನು ಕುಡಿಯಬೇಕು.ಮಹಿಳೆಯರು ಪ್ರತಿದಿನ 2.7 ಲೀಟರ್ (8-9 ಗ್ಲಾಸ್) ನೀರು ಕುಡಿಯಬೇಕು. ಹಣ್ಣುಗಳು ಮತ್ತು ಇತರ ಪಾನೀಯಗಳು ನೀರಿನ ಕೊರತೆಯ 20 ಪ್ರತಿಶತವನ್ನು ಹೊಂದಿವೆ.

ನೀರಿನ ಕೊರತೆಯಿಂದ ಏನಾಗುತ್ತದೆ ?

ಒಣ ಚರ್ಮ

ಮೂತ್ರ ವಿಸರ್ಜನೆಯ ತೊಂದರೆಗಳು

ಹಾಲಿಟೋಸಿಸ್‌

ತಲೆನೋವು, ಆಲಸ್ಯ

ರಕ್ತ ದಪ್ಪವಾಗುವುದು

ಹೃದಯಕ್ಕೆ ಅಪಾಯ

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...