alex Certify ಈ ಶ್ವಾನದ ಹೆಸರಲ್ಲಿದೆ ಕೋಟ್ಯಂತರ ಮೌಲ್ಯದ ಆಸ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶ್ವಾನದ ಹೆಸರಲ್ಲಿದೆ ಕೋಟ್ಯಂತರ ಮೌಲ್ಯದ ಆಸ್ತಿ…!

A millionaire German shepherd is selling a 9-bedroom Miami mansion previously owned by Madonna, with an asking price of more than $30 million | Business Insider Indiaಗುಂತರ್‌ ಹೆಸರಿನ ಈ ಜರ್ಮನ್ ಶೆಪರ್ಡ್ ಶ್ವಾನವು ಟೆನ್ನಿಸ್ ಚೆಂಡಿನೊಂದಿಗೆ ಆಟವಾಡುತ್ತಾ, ಹುಲ್ಲಿನ ಮೇಲೆ ಉರುಳಾಡುತ್ತಾ ಹಾಗೇ ಈಸಿ ಚೇರ್‌ ಮೇಲೆ ಆರಾಮಾಗಿ ಮಲಗುತ್ತಾ ಜೀವನದಲ್ಲಿ ಮಜಾ ಉಡಾಯಿಸುತ್ತಾ ಹಾಗೇ ರಿಯಲ್ ಎಸ್ಟೇಟ್ ಏಜೆಂಟ್‌ಗಳೊಂದಿಗೆ ಮಯಾಮಿಯಲ್ಲಿರುವ ತನ್ನ ಮ್ಯಾನ್ಶನ್‌ನಲ್ಲಿ ’ಮೀಟಿಂಗ್’ ಸಹ ಮಾಡಿದೆ.

ಮಡೋನ್ನಾರಿಂದ ಖರೀದಿಸಲ್ಪಟ್ಟ ಈ ಮ್ಯಾನ್ಶನ್‌ನಲ್ಲಿ ಮೀಟಿಂಗ್‌ ವೇಳೆ ವಜ್ರಲೇಪಿತ ಡಾಗ್‌ಕಾಲರ್‌ ಧರಿಸಿರುವ ಈ ಶ್ವಾನ ಗುಂತರ್‌‌-vi ಎಂದು ಬೆಡ್‌ರೂಂನ ವಾಟರ್‌‌ಫ್ರಂಟ್‌ ಮನೆಯನ್ನು ತನ್ನ ಅಜ್ಜ ಗುಂತರ್‌-iv ನಿಂದ ಪಿತ್ರಾರ್ಜಿತವಾಗಿ ಪಡೆದುಕೊಂಡಿದೆ. ಇದೇ ಮ್ಯಾನ್ಶನ್‌ ಅನ್ನು ಹಿಂದೊಮ್ಮೆ ’ಮೆಟಿರಿಯಲ್ ಗರ್ಲ್’ ಖ್ಯಾತಿಯ ಮಡೊನ್ನಾ ಹೊಂದಿದ್ದರು.

ಚಳಿಗಾಲದಲ್ಲಿ ಕೂದಲ ಆರೈಕೆ ಹೀಗಿರಲಿ

ಎರಡು ದಶಕಗಳ ಹಿಂದೆ ಪಾಪ್ ತಾರೆಯಿಂದ $7.5 ದಶಲಕ್ಷಕ್ಕೆ ಖರೀದಿ ಮಾಡಲ್ಪಟ್ಟ ಈ ಮನೆಯು ಬುಧವಾರದ ಸೇಲ್‌ನಲ್ಲಿ $31.75 ದಶಲಕ್ಷಕ್ಕೆ ಬಿಕರಿಯಾಗಿದೆ. ಈ ಮನೆಯಲ್ಲಿ ಗುಂತರ್‌-iv ರ ಬೃಹತ್‌ ಫೋಟೋವೊಂದನ್ನು ಫ್ರೇಮ್ ಹಾಕಿ ಗೋಡೆಗೆ ಹಾಕಲಾಗಿದೆ.

ಮ್ಯಾನ್ಶನ್ ಮಾಲಕಿಯಾಗಿದ್ದ ಕಾರ್ಲೋಟ್ಟಾ ಲೆಯ್ಬೆನ್‌ಸ್ಟೀನ್‌ 1992ರಲ್ಲಿ ಮೃತಪಟ್ಟ ವೇಳೆ ಮನೆಯನ್ನು ಗುಂತರ್‌-iii ಶ್ವಾನವು ಹಕ್ಕುದಾರನಾಗಿ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಈ ಐಷಾರಾಮಿ ಮ್ಯಾನ್ಶನ್‌ ಅನ್ನು ನಿರ್ವಾಹಕರ ಸಮೂಹವೊಂದು ಕಾಪಾಡಿಕೊಂಡು ಬರುತ್ತಿದ್ದು, ಗುಂತರ್‌‌ನ ವಂಶಸ್ಥರು ಹಾಯಾಗಿ ವಾಸಿಸುತ್ತಾ ಬಂದಿದ್ದಾರೆ.

ಜನರೊಂದಿಗೆ ಭಾರೀ ಸ್ನೇಹಮಯವಾಗಿರುವ ಗುಂತರ್‌‌ ಇತ್ತೀಚೆಗೆ ತನ್ನದೇ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುತ್ತಾ ಮಿಲನ್ ಹಾಗೂ ಬಹಮಾಸ್‌ಗೆಲ್ಲಾ ಭೇಟಿ ಕೊಟ್ಟು ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಡೈನಿಂಗ್ ಮಾಡುತ್ತಾ ಬರುತ್ತಿದ್ದಾನೆ. ಈತನಿಗೆ ರುಚಿಯಾದ ಭಕ್ಷ್ಯಗಳನ್ನು ಉಣಬಡಿಸಲು ಬಾಣಸಿಗರು ಇದ್ದಾರೆ.

A millionaire German shepherd is selling a 9-bedroom Miami mansion previously owned by Madonna, with an asking price of more than $30 million | Business Insider India

This Millionaire Dog Is Selling A 9-Bedroom Miami Mansion Once Owned By Madonna For $30 Million. See Pictures
This Millionaire Dog is Selling A Lush US Villa Once Owned by Madonna
This Millionaire Dog is Selling A Lush US Villa Once Owned by Madonna
miami villa

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...