alex Certify ಇಂದಿರಾಗಾಂಧಿಯವರ ಜನ್ಮ ದಿನೋತ್ಸವದಂದು ಅಪರೂಪದ ವಿಡಿಯೋ ಶೇರ್ ಮಾಡಿದ ಕಾಂಗ್ರೆಸ್‌ ಖಜಾಂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿರಾಗಾಂಧಿಯವರ ಜನ್ಮ ದಿನೋತ್ಸವದಂದು ಅಪರೂಪದ ವಿಡಿಯೋ ಶೇರ್ ಮಾಡಿದ ಕಾಂಗ್ರೆಸ್‌ ಖಜಾಂಚಿ

ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ 104ನೇ ಜನ್ಮದಿನೋತ್ಸವದಂದು ನೆಟ್ಟಿಗರು ಅವರ ಸ್ಮರಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆ ಕಾಲದ ಅನೇಕ ಮಹತ್ವದ ಘಟನೆಗಳ ಝಲಕ್‌‌ಗಳನ್ನು ಹಂಚಿಕೊಂಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌‌ನ ರಾಷ್ಟ್ರೀಯ ಖಜಾಂಚಿ ಹಾಗೂ ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಸಲಹಾ ಸಮಿತಿಯ ಸದಸ್ಯರೂ ಆದ ಭೂಷಣ್ ಪಾಟೀಲ್ ಈ ಅಪರೂಪದ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

ಚಂದ್ರನ ಅಂಗಳಕ್ಕೆ ಕಾಲಿಟ್ಟ ಮೊದಲ ಭಾರತೀಯ ರಾಕೇಶ್ ಶರ್ಮಾ ಹಾಗೂ ಇಂದಿರಾ ಗಾಂಧಿಯವರ ನಡವಿನ ಸಂಭಾಷಣೆಯ ವಿಡಿಯೋ ಇದಾಗಿದೆ. 1984 ರಲ್ಲಿ ಸೋವಿಯತ್‌ನ ಇಂಟರ್‌ಕಾಸ್ಮೋಸ್‌ ಕಾರ್ಯಕ್ರಮದ ಭಾಗವಾಗಿ ಸೋಯುಜ಼್‌ ಟಿ-11ರಲ್ಲಿ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿದ್ದ ವಿಂಗ್ ಕಮಾಂಡರ್‌ ರಾಕೇಶ್‌ ಶರ್ಮಾ ಭಾರತೀಯ ವಾಯುಪಡೆಯ ಮಾಜಿ ಪೈಲಟ್ ಆಗಿದ್ದಾರೆ.

ವಿಚ್ಛೇದನದ ನಂತ್ರ ತಂದೆಗಿರಲ್ವಾ ಮಗು ಮೇಲೆ ಹಕ್ಕು…? ಹೈಕೋರ್ಟ್ ನಿಂದ ಮಹತ್ವದ ತೀರ್ಪು

“ಮೇಲಿನಿಂದ ಭಾರತ ನಿಮಗೆ ಹೇಗೆ ಕಾಣುತ್ತಿದೆ?” ಎಂದು ಇಂದಿರಾ ಗಾಂಧಿಯವರು ಕೇಳುತ್ತಲೇ, “ಯಾವುದೇ ಮುಜುಗರವಿಲ್ಲದೇ ಹೇಳಬಲ್ಲೆ, ಸಾರೇ ಜಹಾಂ ಸೇ ಅಚ್ಛಾ,” ಎಂದು ರಾಕೇಶ್‌ ಶರ್ಮಾ ಹೇಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

“ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ, ಭಾರತ ರತ್ನ ಇಂದಿರಾ ಗಾಂಧಿರನ್ನು ಇಂದು ಅವರ ಜಯಂತಿಯನ್ನು, ಇಂದಿರಾ ಜೀ ಹಾಗೂ ಸ್ಕ್ವಾಡರ್ನ್ ಲೀಡರ್‌ ರಾಕೇಶ್‌ ಶರ್ಮಾ ನಡುವಿನ ಈ ಸುಂದರ ಸಂವಹನದ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಕೇಳುತ್ತಲೇ ಸಾರೇ ಜಹಾಂ ಸೇ ಅಚ್ಛಾ ಎಂದು ಶರ್ಮಾ ಹೇಳಿದ್ದಾರೆ,” ಎಂದು ಭೂಷಣ್ ಹೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...