alex Certify ʼಕ್ರಿಸ್ಮಸ್​ ಟ್ರಿʼ ಅಲಂಕಾರ ಮಾಡೋದ್ರ ಹಿಂದಿದೆ ಈ ಕಾರಣ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರಿಸ್ಮಸ್​ ಟ್ರಿʼ ಅಲಂಕಾರ ಮಾಡೋದ್ರ ಹಿಂದಿದೆ ಈ ಕಾರಣ……!

ಹಸಿರಿನಿಂದ ಕಂಗೊಳಿಸುವ ಪೈನ್​ ಮರ ಕ್ರಿಸ್​ ಮಸ್​​ ಮರವೆಂದೇ ಚಿರಪರಿಚಿತ. ಕ್ರಿಶ್ಚಿಯನ್​ರ ದೊಡ್ಡ ಹಬ್ಬವಾದ ಕ್ರಿಸ್​​ಮಸ್​​ ಈ ಮರವಿಲ್ಲದೇ ನಡೆಯೋಕೆ ಸಾಧ್ಯವೇ ಇಲ್ಲ. ಡಿಸೆಂಬರ್​ ತಿಂಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರತಿಯೊಂದು ಮನೆಯಲ್ಲೂ ಈ ಮರ ಅಲಂಕಾರಗೊಂಡಿರುತ್ತೆ.‌

ಈ ಕ್ರಿಸ್​ಮಸ್​ ಗಿಡಕ್ಕೆ ಆಟಿಕೆ ಸಾಮಗ್ರಿ, ಅಲಂಕಾರಿಕ ವಸ್ತು ಹಾಗೂ ದೀಪಾಲಂಕಾರವನ್ನ ಮಾಡುವ ರೂಢಿ ಬಹಳ ವರ್ಷಗಳಿಂದ ನಡೆದುಕೊಂಡು ಬರ್ತಿದೆ. ಕ್ರಿಶ್ಚಿಯನ್​ ಸಮುದಾಯದ ಇತಿಹಾಸವನ್ನ ಕೆದಕುತ್ತಾ ಹೋದರೆ ಈ ಕ್ರಿಸ್​ಮಸ್​ ಗಿಡಕ್ಕೆ ಅಲಂಕಾರ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬರ್ತಿತ್ತು ಎಂಬ ವಿಚಾರ ತಿಳಿದು ಬರುತ್ತೆ.

ಈಗ ಪೈನ್​ ಗಿಡ ಸಿಗಲಿಲ್ಲ ಅಂದರೆ ಕೃತಕ ಕ್ರಿಸ್​ಮಸ್​ ಗಿಡಕ್ಕಾದರೂ ಅಲಂಕಾರವನ್ನ ಮಾಡಲಾಗುತ್ತೆ. ಆದರೆ ಈ ರೀತಿ ಕ್ರಿಸ್​ಮಸ್​ ಗಿಡಗಳನ್ನ ಮೊದಲು ಅಲಂಕಾರ ಮಾಡಲು ಶುರು ಮಾಡಿದ್ದು 16ನೇ ಶತಮಾನದ ಆರಂಭದಲ್ಲಂತೆ.

ಆಧುನಿಕ ಜಮರ್ನಿಯ ನವೋದಯದ ಸಂದರ್ಭದಲ್ಲಿ ಈ ಪದ್ಧತಿ ಆರಂಭವಾಯ್ತು ಅಂತಾ ಇತಿಹಾಸ ಹೇಳುತ್ತೆ. ಅಲಂಕರಿಸಿದ ಮರಗಳನ್ನ ಮರದ ಪಿರಮಿಡ್​ಗಳ ಮೇಲೆ ನಿಲ್ಲಿಸಿ ಮೇಣದ ಬತ್ತಿಯನ್ನ ಹಚ್ಚಿ ಅಲಂಕಾರ ಮಾಡುತ್ತಿದ್ದರಂತೆ. ಅಂದಿನಿಂದ ಕ್ರಿಶ್ಚಿಯನ್ನರು ಡಿಸೆಂಬರ್ ತಿಂಗಳಲ್ಲಿ ಕ್ರಿಸ್​ಮಸ್​ ಮರವನ್ನ ಅಲಂಕಾರ ಮಾಡಲು ಶುರು ಮಾಡಿದರು ಎನ್ನಲಾಗುತ್ತೆ.

ಇತಿಹಾಸಕಾರರು ಹೇಳುವಂತೆ 16ನೇ ಶತಮಾನದ ಪ್ರೊಟೆಸ್ಟಂಟ್ ಸುಧಾರಕ ಮಾರ್ಟಿನ್​ ಲೂಥರ್​ ಮೊದಲು ಮರಕ್ಕೆ ಮೇಣದ ಬತ್ತಿ ಬೆಳಗಿದವರು. ಆದರೆ 1576ರಿಂದಲೇ ಕ್ರಿಸ್​ಮಸ್​ ವೃಕ್ಷ ಪ್ರಾತಿನಿಧ್ಯದಲ್ಲಿತ್ತು ಅನ್ನೋದಕ್ಕೆ ಅಲ್ಸೇನ್​ನ ಟರ್ಕ್​ಹೈಮ್​ನಲ್ಲಿ ಸಾಕ್ಷ್ಯಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...