alex Certify ಅಧಿಕಾರಕ್ಕೆ ಬಂದ್ರೆ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಅವಕಾಶ…! ಆಶ್ವಾಸನೆ ನೀಡಿದೆ ಈ ಪಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಕ್ಕೆ ಬಂದ್ರೆ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಅವಕಾಶ…! ಆಶ್ವಾಸನೆ ನೀಡಿದೆ ಈ ಪಕ್ಷ

ಭಾರತದಲ್ಲಿ ಸಂಚಾರ ಸುರಕ್ಷತೆಯು ಒಂದು ಪ್ರಮುಖ ವಿಚಾರವಾಗಿದೆ. ಪ್ರತಿ ವರ್ಷ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಜೀವ ಬಿಡುವ ಮಂದಿಯ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ನಿಯಮಗಳು ಮತ್ತು ನಿಬಂಧನೆಗಳನ್ನು ತಂದು ಅವುಗಳನ್ನು ಅನುಷ್ಠಾನ ಮಾಡಲು ಬಹಳ ಪ್ರಯತ್ನ ಪಡುತ್ತಿವೆ.

ಇದಕ್ಕೆ ಅನುಗುಣವಾಗಿ, ದೇಶದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ರಸ್ತೆ ಸಾರಿಗೆ ಸಚಿವಾಲಯ ಈ ಸಂಬಂಧ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ವರ್ಷ, ಭಾರತದಲ್ಲಿ ರಸ್ತೆ ಅಪಘಾತಗಳಿಂದ ಉಂಟಾಗುವ ಅತಿ ಹೆಚ್ಚಿನ ಸಂಖ್ಯೆಯ ಸಾವುಗಳನ್ನು ಕಾಣುವ ದೇಶಗಳ ಪಟ್ಟಿಯಲ್ಲಿ ಬರುತ್ತಲೇ ಇದೆ. ಈ ಸಾವುನೋವುಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಸೇರಿದ್ದಾರೆ.

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಸ್ವಾಭಾವಿಕವಾಗಿ ನಾಲ್ಕು-ಚಕ್ರ ವಾಹನಗಳಿಗಿಂತ ಕಡಿಮೆ ಸುರಕ್ಷಿತವಾಗಿರುವ ದ್ವಿಚಕ್ರ ವಾಹನಗಳು ಅಪಘಾತಗಳಿಗೆ ಹೆಚ್ಚು ಒಳಗಾಗುತ್ತವೆ. ಸವಾರಿ ಮಾಡುವಾಗ ಹೆಲ್ಮೆಟ್‌ ಧಾರಣೆ ತಪ್ಪಿಸುವುದು ಮತ್ತು ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರನ್ನು ಹೊತ್ತೊಯ್ಯುವುದು ಅಪಘಾತಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.

ಮೋಟಾರು ವಾಹನ ಕಾಯ್ದೆಯ ಪ್ರಕಾರ, ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಸವಾರರನ್ನು ಕರೆದೊಯ್ಯುವುದು ಶಿಕ್ಷಾರ್ಹ ಅಪರಾಧ ಮತ್ತು ಭಾರಿ ದಂಡಕ್ಕೆ ಕಾರಣವಾಗುತ್ತದೆ. ಆದರೆ ಇದರ ಹೊರತಾಗಿಯೂ, ಮೋಟಾರ್‌ಸೈಕಲ್ ಅಥವಾ ಸ್ಕೂಟರ್‌ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸವಾರರು ಚಲಿಸುವ ಘಟನೆಗಳು ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿವೆ.

ಇದೀಗ, ಉತ್ತರ ಪ್ರದೇಶದ ರಾಜಕಾರಣಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಸವಾರರನ್ನು ಕೊಂಡೊಯ್ಯುವ ಪರವಾಗಿ ಮಾತನಾಡಿದ್ದಾರೆ. ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಸಂಸ್ಥಾಪಕ ಮತ್ತು ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ದ್ವಿಚಕ್ರ ವಾಹನದಲ್ಲಿ ಮೂವರು ಸವಾರರಿಗೆ ಅವಕಾಶ ನೀಡಬೇಕು ಎನ್ನುತ್ತಾರೆ.

ಉತ್ತರ ಪ್ರದೇಶದ ಚುನಾವಣೆ ಪ್ರಚಾರ ಅಭಿಯಾನದಲ್ಲಿ ಭಾಗಿಯಾಗಿರುವ ಓಂ ಪ್ರಕಾಶ್ ರಾಜ್‌ಭರ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದ್ವಿಚಕ್ರ ವಾಹನದಲ್ಲಿ ಮೂವರು ಸವಾರರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. 70 ಆಸನ ಸಾಮರ್ಥ್ಯದ ರೈಲು 300 ಪ್ರಯಾಣಿಕರನ್ನು ಹೊತ್ತೊಯ್ಯಬಹುದಾದರೆ, ಬೈಕುಗಳಲ್ಲಿ ಇಬ್ಬರು ಹಿಂಬದಿ ಸವಾರರನ್ನು ಸಾಗಿಸುವುದು ಏಕೆ ದಂಡಕ್ಕೆ ಕಾರಣವಾಗುತ್ತಿದೆ ಎಂದು ಪ್ರಶ್ನಿಸುತ್ತಾರೆ ಓಂ ಪ್ರಕಾಶ್. ದ್ವಿಚಕ್ರ ವಾಹನದಲ್ಲಿ ಮೂವರು ಸವಾರರನ್ನು ಅನುಮತಿಸಲು ಸಾಧ್ಯವಾಗದಿದ್ದಲ್ಲಿ ತಮ್ಮ ಸರ್ಕಾರವು ಜೀಪ್ ಮತ್ತು ರೈಲುಗಳಿಗೆ ದಂಡ ವಿಧಿಸಲು ಪ್ರಾರಂಭಿಸುತ್ತದೆ ಎಂದು ಓಂ ಪ್ರಕಾಶ್ ರಾಜ್‌ಭರ್ ಹೇಳಿಕೊಂಡಿದ್ದಾರೆ.

ಓಂ ಪ್ರಕಾಶರ ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...