alex Certify ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ.

ಆದರೆ ಈ ಮಾತಿಗೆ ಅಪವಾದವಾಗಿರುವ ಇಂಡೋ-ಇಟಾಲಿಯನ್ ಅತ್ತೆ – ಸೊಸೆ ಜೋಡಿಯೊಂದು ತಮ್ಮ ಅವಿನಾಭಾವ ಸಂಬಂಧದಿಂದಾಗಿ ನೆಟ್ಟಿಗರ ಹೃದಯ ಗೆದ್ದಿದೆ.

ಯುಎಸ್ ಥಿಯೇಟರ್ ನಲ್ಲಿ ‘ಜಿಂಗಾಟ್‌’ಗೆ ಕುಣಿದು ಕುಪ್ಪಳಿಸಿದ ದೇಶಿ ಸಿನಿಪ್ರೇಮಿಗಳು: ಹಳೆ ವಿಡಿಯೋ ಮತ್ತೆ ವೈರಲ್

ಇಟಾಲಿಯನ್ ಯೂಟ್ಯೂಬರ್‌ ಹಿಲಾ ರಫೆಲ್ಲೋ ಹಾಗೂ ಆಕೆಯ ಭಾರತೀಯ ಅತ್ತೆ ಲೀನಾ ಜೈನ್‌ ಹೀಗೆ ಸುದ್ದಿಯಲ್ಲಿದ್ದಾರೆ.

“ಅತ್ತೆ ಬಹಳ ಮುಕ್ತ ಮನಸ್ಸಿನವರು. ನಾನು ಅವರೊಂದಿಗೆ ಯಾವುದೇ ವಿಚಾರವಾಗಿ ಬೇಕಾದರೂ ಮಾತನಾಡಬಹುದು. ನಮಗೆ ನೃತ್ಯ, ವ್ಯಾಯಾಮ, ಆರೋಗ್ಯಕರ ಭೋಜನ ಹಾಗೂ ಜೊತೆಯಾಗಿ ಹೊರ ಹೋಗುವುದು ಬಹಳ ಇಷ್ಟ,” ಎಂದು 33 ವರ್ಷ ವಯಸ್ಸಿನ ಗಿಲಾ ತಿಳಿಸಿದ್ದಾರೆ.

“ಗಿಲಾ ನನ್ನಂತೆಯೇ ಇದ್ದಾಳೆ. ನನ್ನ ಮಗ ಶ್ರೇಯಾಂಸ್‌ಗಿಂತಲೂ ಆಕೆ ನನ್ನದೇ ಮಗಳು ಎಂದು ಜನರು ಹೇಳುತ್ತಾರೆ,” ಎಂದು 53 ವರ್ಷ ವಯಸ್ಸಿನ ಲೀನಾ ತಿಳಿಸುತ್ತಾರೆ.

ಯಶಸ್ಸು ಬಯಸುವವರು ಇದನ್ನು ಪಾಲಿಸಿ

ಸೆಪ್ಟೆಂಬರ್‌ 2016ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಒಂದರಲ್ಲಿ ಭೇಟಿಯಾದ ಗಿಲಾ ಹಾಗೂ ಶ್ರೆಯಾಂಸ್, ಬರ್ಲಿನ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ತಮ್ಮ ಮೊದಲ ಡೇಟ್‌ ಬಗ್ಗೆ ಮಾತನಾಡಲು ಆರು ಗಂಟೆ ತೆಗೆದುಕೊಂಡಿದ್ದಾರೆ. “ನಮ್ಮದು ಮೊದಲ ನೋಟದ ಪ್ರೇಮವೇ ಎಂದು ಜನ ಕೇಳುತ್ತಾರೆ. ನಮ್ಮದು ಮೊದಲ ಸಂಭಾಷಣೆಯ ಪ್ರೇಮ ಎಂದು ನಾನು ಹೇಳುತ್ತೇನೆ,” ಎನ್ನುತ್ತಾರೆ ಗಿಲಾ.

ವಿದೇಶಿಯರಾಗಿದ್ದರೂ ಶ್ರೆಯಾಂಸ್‌ರ ಕುಟುಂಬದೊಂದಿಗೆ ಗಿಲಾ ಬಲುಬೇಗ ಹೊಂದಿಕೊಂಡಿದ್ದಾರೆ.

“ಭಾರತ ಹಾಗೂ ಇಟಾಲಿಯನ್ ಸಂಸ್ಕೃತಿಗಳಲ್ಲಿ ಸಾಮ್ಯತೆ ಇದೆ. ರೋಮ್‌ನ ಟ್ರಾಫಿಕ್ ದೆಹಲಿಯಷ್ಟೇ ಕೆಟ್ಟದಾಗಿದೆ. ಇಟಲಿಯಲ್ಲೂ ಸಹ ಬೀದಿ ಬದಿಯ ಆಹಾರದ ಕಾರ್ಟ್‌ಗಳು ಇವೆ. ನಾವು ಕೌಟುಂಬಿಕ ಸಭೆಗಳನ್ನು ಇಷ್ಟ ಪಡುತ್ತೇವೆ. ನಾವು ಜೋರು. ಭಾರತದಲ್ಲಿಯಂತೆಯೇ ಇಟಲಿಯಲ್ಲೂ ಗಾಸಿಪ್ ಸೆಶನ್‌ಗಳು ನಡೆಯುತ್ತವೆ. ಇಟಲಿಯಲ್ಲೂ ಸಹ ಅತ್ತೆ – ಸೊಸೆಯಂದಿರ ತಿಕ್ಕಾಟಗಳು ಇವೆ,” ಎನ್ನುತ್ತಾರೆ ಗಿಲಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...