alex Certify ಯುಎಸ್ ಥಿಯೇಟರ್ ನಲ್ಲಿ ‘ಜಿಂಗಾಟ್‌’ಗೆ ಕುಣಿದು ಕುಪ್ಪಳಿಸಿದ ದೇಶಿ ಸಿನಿಪ್ರೇಮಿಗಳು: ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಎಸ್ ಥಿಯೇಟರ್ ನಲ್ಲಿ ‘ಜಿಂಗಾಟ್‌’ಗೆ ಕುಣಿದು ಕುಪ್ಪಳಿಸಿದ ದೇಶಿ ಸಿನಿಪ್ರೇಮಿಗಳು: ಹಳೆ ವಿಡಿಯೋ ಮತ್ತೆ ವೈರಲ್

Desi people dance to Zingaat at theatre in US. Old video goes viral - Trending News Newsಯುಎಸ್‌ನ ಕೊಲೊರಾಡೋದ ಥಿಯೇಟರ್‌ನಲ್ಲಿ ಸೈರಾಟ್ ಚಿತ್ರದ ಜಿಂಗಾಟ್‌ ಹಾಡಿಗೆ ನೃತ್ಯ ಮಾಡಿದ್ದ ದೇಶಿ ಜನರ ವಿಡಿಯೋ ಮತ್ತೆ ವೈರಲ್ ಆಗಿದೆ.

ಹೌದು, 2016 ರಲ್ಲಿ ಪೂನಂ ಎಂಬ ಬಳಕೆದಾರರು ಯೂಟ್ಯೂಬ್‌ನಲ್ಲಿ 4 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದರು, ಇದೀಗ ಈ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ವಿಡಿಯೋವನ್ನು 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ದೊಡ್ಡ ಪರದೆಯ ಮುಂದೆ ಜನರು ಕುಣಿಯುತ್ತಿರುವುದನ್ನು ನೋಡಬಹುದು. ಮರಾಠಿ ಚಲನಚಿತ್ರ ಸೈರಾಟ್‌ನ ಜಿಂಗಾಟ್ ಹಾಡು ತೆರೆಯ ಮೇಲೆ ಪ್ಲೇ ಆದ ಕೂಡಲೇ, ಎದ್ದು ಬಂದ ದೇಶಿ ಚಿತ್ರಪ್ರೇಮಿಗಳು ಕುಣಿದು ಕುಪ್ಪಳಿಸಿದ್ದಾರೆ.

ಸಿನಿಪ್ರೇಮಿಗಳು ತುಂಬಾ ಉತ್ಸಾಹದಿಂದ ಸ್ಟೆಪ್ ಹಾಕಿದ್ರೆ, ಥಿಯೇಟರ್‌ನಲ್ಲಿದ್ದ ಇತರೆ ಜನರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಂಗಾಟ್ 2016 ರ ಮರಾಠಿ ಚಲನಚಿತ್ರ ಸೈರಾಟ್‌ನ ಜನಪ್ರಿಯ ಗೀತೆಯಾಗಿದ್ದು, ರಿಂಕು ರಾಜಗುರು ಮತ್ತು ನಾಗರಾಜ ಮಂಜುಳೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜಯ್ ಗೋಗವಾಲೆ ಅವರು ಹಾಡಿದ್ದು, ಅಜಯ್ ಮತ್ತು ಅತುಲ್ ಸಂಗೀತ ಸಂಯೋಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...