alex Certify ಸಂಪೂರ್ಣ ನಗರವನ್ನೇ ಒಳಗೊಂಡಿದೆ ದಕ್ಷಿಣ ಭಾರತದ ಈ ಬೃಹತ್‌ ದೇವಾಲಯ; ಇಲ್ಲಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪೂರ್ಣ ನಗರವನ್ನೇ ಒಳಗೊಂಡಿದೆ ದಕ್ಷಿಣ ಭಾರತದ ಈ ಬೃಹತ್‌ ದೇವಾಲಯ; ಇಲ್ಲಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ…!

ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೂ ಮೊದಲು  ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಾಲ ವಿಶೇಷ ಆಚರಣೆಯನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಯಮ ನಿಯಮಗಳನ್ನು ಅನುಸರಿಸಿ ಉಪವಾಸ ಕೈಗೊಂಡಿದ್ದಾರೆ.

ಜನವರಿ 20 ರಂದು ಪ್ರಧಾನಿ ಮೋದಿ , ತಿರುಚ್ಚಿ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನವನ್ನು ತಲುಪಲಿದ್ದಾರೆ. ಇದು ದೇಶದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾಗಿದ್ದು, ಅತ್ಯಂತ ಭವ್ಯವಾಗಿದೆ.

ಪ್ರಧಾನಿ ದಕ್ಷಿಣ ಭಾರತದ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ದೇವಾಲಯವು 156 ಎಕರೆಗಳಷ್ಟು ವಿಸ್ತಾರವಾಗಿದೆ. ವಿಷ್ಣುವಿಗೆ ಸಮರ್ಪಿತವಾಗಿರುವ ಈ ದೇವಾಲಯದಲ್ಲಿ ವಿಗ್ರಹದಿಂದ ಹಿಡಿದು ದೇವಾಲಯದ ವೈಶಾಲ್ಯ, ಸೌಂದರ್ಯ, ಭವ್ಯತೆ ಎಲ್ಲವೂ ಬಹಳ ವಿಶೇಷವಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಾಲಯ ಅತ್ಯಂತ ಪುರಾತನವಾದದ್ದು. ಇಡೀ ನಗರವು ಈ ದೇವಾಲಯದ ಸಂಕೀರ್ಣದಲ್ಲಿ ನೆಲೆಗೊಂಡಿದೆ ಎಂದು ಹೇಳಬಹುದು. ದೇವಾಲಯದ ಪ್ರಾಂಗಣದಲ್ಲಿ ಹೋಟೆಲ್‌ಗಳು ಮತ್ತು ಸಾಮಾನ್ಯ ಅಂಗಡಿಗಳು ಮಾತ್ರವಲ್ಲ, ಸಂಪೂರ್ಣ ವಸತಿ ಸ್ಥಳ, ದೊಡ್ಡ ಮಾರುಕಟ್ಟೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಈ ದೇವಾಲಯದ ಒಳಗೆ 49 ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲಾಗಿದೆ, ಇವೆಲ್ಲವೂ ವಿಷ್ಣುವಿಗೆ ಸಮರ್ಪಿತವಾಗಿದೆ.

ವಿಷ್ಣುವನ್ನು ದಕ್ಷಿಣದಲ್ಲಿ ಶ್ರೀ ರಂಗನಾಥ ಸ್ವಾಮಿ ಎಂದು ಕರೆಯಲಾಗುತ್ತದೆ. ಹಾಸಿಗೆಯ ಮೇಲೆ ಶೇಷನಾಗನನ್ನು ಹೊತ್ತಿರುವ ವಿಷ್ಣುವಿನ ಬೃಹತ್ ವಿಗ್ರಹ ಇಲ್ಲಿನ ಪ್ರಮುಖ ಆಕರ್ಷಣೆ.

ದೇವಾಲಯದ ವಾಸ್ತುಶಿಲ್ಪವು ತಮಿಳು ಶೈಲಿಯನ್ನು ಆಧರಿಸಿದೆ. 21 ಗೋಪುರಗಳು ಮತ್ತು 1000 ಕಂಬಗಳಿಂದ ದೇವಸ್ಥಾನ ಮಾಡಲ್ಪಟ್ಟಿದೆ. ಆದರೆ ಈಗ ಅದರ 953 ಕಂಬಗಳು ಮಾತ್ರ ಗೋಚರಿಸುತ್ತಿವೆ. ಈ ಪುರಾತನ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ (1336-1565) ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...