alex Certify ನೆರೆಮನೆ ಕೋಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆರೆಮನೆ ಕೋಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭೂಪ….!

ಎಪ್ಪತ್ತಾರು ವರ್ಷದ ಫ್ರೆಡ್ರಿಕ್​-ವಿಲ್ಹೆಲ್ಮ್​ ಕೆ ಮತ್ತು ಅವರ ಪತ್ನಿ ಜುಟ್ಟಾ ಜರ್ಮನಿಯ ಬ್ಯಾಡ್​ ಸಾಲ್ಜುಫ್ಲೆನ್​ನಲ್ಲಿ ವಾಸಿಸುತ್ತಿದ್ದು ಅವರು ನೆರೆಮನೆ ಕೋಳಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಅವರ ದೂರಿನ ಪ್ರಕಾರ, ಕೋಳಿಯ ಧ್ವನಿಯಿಂದ ಹಿಂಸೆಯಾಗುತ್ತಿದೆ. ನೆರೆಮನೆಯಾತ ಕೋಳಿಯನ್ನು ರಾತ್ರಿಯಲ್ಲಿ ಬೀಗ ಹಾಕಲ್ಪಟ್ಟಿಡುವುದರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೂಗುವುದಿಲ್ಲ, ಆದರೆ ನಂತರ ದಿನವಿಡೀ 100 ರಿಂದ 200 ಬಾರಿ ಕೂಗುತ್ತದೆ ಎಂದು ತಮ್ಮ ಸಂಕಟವನ್ನು ವಿವರಿಸಿದ್ದಾರೆ.

ಈ ಕೋಳಿ ನಿರಂತರವಾಗಿ ಕೂಗುವುದರಿಂದ ಮನೆ ಕಿಟಕಿ ತೆರೆದು ಉದ್ಯಾನವನ್ನು ಬಳಸಲು ಸಾಧ್ಯವಿಲ್ಲ, ನಾವು ಸಾಕಷ್ಟು ಪ್ರಯತ್ನ ಮಾಡಿದೆವು. ನಮ್ಮ ನೆರೆಹೊರೆಯವರು ಸಹ ಅದರ ಧ್ವನಿಯಿಂದ ಬೇಸರಗೊಂಡಿದ್ದಾರೆ. ಹಲವಾರು ದೂರುಗಳ ಹೊರತಾಗಿಯೂ ಮಾಲೀಕರು ಆ ಕೋಳಿಯನ್ನು ಬಿಟ್ಟುಕೊಡುವುದಿಲ್ಲ. ಆದ್ದರಿಂದ, ಮೈಕೆಲ್​ ಮತ್ತು ಕೋಳಿ ವಿರುದ್ಧ ಮೊಕದ್ದಮೆ ಹೂಡುವುದನ್ನು ಬಿಟ್ಟು ಯಾವುದೇ ಆಯ್ಕೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ದೂರಿನ ಅನುಸಾರ ಪ್ರಕರಣ ದಾಖಲಿಸಿದ್ದಾರೆ. ಅವರ ವಕೀಲರ ಪ್ರಕಾರ ಸಾಮಾನ್ಯ ಕೋಳಿಯ ಧ್ವನಿ 80 ಡೆಸಿಬಲ್​ಗಳ ತಲುಪುತ್ತದೆ. ಇದರದ್ದು 95 ಡೆಸಿಬಲ್​ಗಳವರೆಗೆ ತಲುಪುತ್ತದೆ, ಇದು ರಸ್ತೆ ಅಥವಾ ಬಿಡುವಿಲ್ಲದ ರೆಸ್ಟೋರೆಂಟ್​ಗಳಲ್ಲಿ ದಟ್ಟಣೆಯ ಶಬ್ದಕ್ಕೆ ಸಮಾನವಾಗಿರುತ್ತದೆ. ಇದಲ್ಲದೆ, ಕೋಳಿಯ ಅಸಹನೀಯ ಧ್ವನಿಯಿಂದಾಗಿ ನೆರೆಹೊರೆಯವರಲ್ಲಿ ಒಬ್ಬರು ಬೇರೆ ಕಡೆ ವರ್ಗವಾದರು ಎಂದಿದ್ದಾರೆ.  ಹೀಗಾಗಿ ವಿಲಿಯಂ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಮತ್ತೊಂದೆಡೆ, ಕೋಳಿ ಮಾಲೀಕ ಮೈಕಲ್ ಕೋಳಿಗಳು ತನ್ನ ಗಾರ್ಡನ್​ಗೆ ಅತ್ಯಗತ್ಯ ಎಂದು ಹೇಳಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...