alex Certify ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿದೆ ಭಾರತದ ಈ ಫೇಮಸ್‌ ತಿನಿಸು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿದೆ ಭಾರತದ ಈ ಫೇಮಸ್‌ ತಿನಿಸು…!

ತಿನ್ನೋದು ಅಂದ್ರೆ ಎಲ್ಲರೂ ಇಷ್ಟಪಡುವಂತಹ ಕೆಲಸ. ಅದರಲ್ಲೂ ರುಚಿಯಾದ ತಿನಿಸುಗಳು ಸಿಕ್ಕರೆ ಯಾರು ಬಿಡ್ತಾರೆ ಹೇಳಿ ? ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋದಾಗ ಭಿನ್ನ-ವಿಭಿನ್ನ ಭಕ್ಷ್ಯಗಳನ್ನು ಟ್ರೈ ಮಾಡೋದು ಸಾಮಾನ್ಯ. ಆದರೆ ನಾವು ಟೇಸ್ಟ್‌ ಮಾಡಿದ ತಿನಿಸುಗಳೆಲ್ಲ ರುಚಿಯಾಗಿಯೇ ಇರುವುದಿಲ್ಲ. ಜಗತ್ತಿನಲ್ಲಿ ಅತ್ಯಂತ ಕೆಟ್ಟ ತಿಂಡಿಗಳು ಕೂಡ ಇವೆ.

ಇತ್ತೀಚೆಗೆ ಟೇಸ್ಟ್ ಅಟ್ಲಾಸ್ “ವಿಶ್ವದ ಟಾಪ್ 100 ವರ್ಸ್ಟ್ ರೇಟೆಡ್ ಫುಡ್” ಲಿಸ್ಟ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಡಿಮೆ ಶ್ರೇಣಿಯನ್ನು ಪಡೆದ ಎಲ್ಲಾ 100 ಭಕ್ಷ್ಯಗಳ ಬಗ್ಗೆ ಹೇಳಲಾಗಿದೆ. ಭಾರತ ಮತ್ತು ಅಮೆರಿಕದ ತಿನಿಸುಗಳು ಕೂಡ ಈ ಪಟ್ಟಿಯಲ್ಲಿವೆ. ಜನರಿಗೆ ತುಸುವೂ ಇಷ್ಟವಾಗದ ಆ ಭಕ್ಷ್ಯಗಳ ಬಗ್ಗೆ ತಿಳಿದುಕೊಳ್ಳೋಣ.

ಟೇಸ್ಟ್ ಅಟ್ಲಾಸ್ ಎಂದರೇನು?

ಇದು ಸಾಂಪ್ರದಾಯಿಕ ಆಹಾರಗಳಿಗೆ ಆನ್‌ಲೈನ್ ಮಾರ್ಗದರ್ಶಿ. ಪಾಕವಿಧಾನಗಳು, ಆಹಾರ ವಿಮರ್ಶೆಗಳು ಮತ್ತು ಜನಪ್ರಿಯ ಪದಾರ್ಥ, ಭಕ್ಷ್ಯಗಳ ಕುರಿತು ಸಂಶೋಧನೆಗಳನ್ನು ಒದಗಿಸುತ್ತದೆ. ಇತ್ತೀಚೆಗೆ, ಅವರು ಪ್ರಕಟಿಸಿದ ವರದಿ ಕಡಿಮೆ ರೇಟಿಂಗ್‌ ಪಡೆದ ಭಕ್ಷ್ಯಗಳನ್ನು ಹೈಲೈಟ್ ಮಾಡಿದೆ. ಈ ಪಟ್ಟಿಯಲ್ಲಿ ಪ್ರಪಂಚದ ವಿವಿಧ ಮೂಲೆಗಳ ಆಹಾರವಿದೆ. ಅತ್ಯಂತ ಕೆಟ್ಟದಾಗಿರೋ ಈ ತಿನಿಸುಗಳನ್ನು ಟೇಸ್ಟ್‌ ಮಾಡುವ ಮುನ್ನ ಜನರು ಹತ್ತಾರು ಬಾರಿ ಯೋಚಿಸಲೇಬೇಕು.

ಭಾರತದ ಪ್ರಸಿದ್ಧ ಪಲ್ಯ ‘ಆಲೂ-ಬೆಂಗನ್‌’ ಕೂಡ ಈ ಪಟ್ಟಿಯಲ್ಲಿದೆ. ಆಲೂಗಡ್ಡೆ ಮತ್ತು ಬದನೆಕಾಯಿಯಿಂದ ತಯಾರಿಸಿದ ಈ ಪಲ್ಯವನ್ನು ಭಾರತದ ಬಹುತೇಕ ಕಡೆ ತಿನ್ನಲಾಗುತ್ತದೆ. ಆಲೂಗಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮಸಾಲೆಗಳ ಸಂಯೋಜನೆಯನ್ನು ಇದು ಒಳಗೊಂಡಿರುತ್ತದೆ. ಬಹಳ ರುಚಿಯಾಗಿರುತ್ತದೆ.

ಆದರೆ ಜನರ ವೋಟಿಂಗ್‌ ಆಧಾರದಲ್ಲಿ ನೋಡಿದ್ರೆ ಆಲೂ-ಬೆಂಗನ್‌ ಪಲ್ಯಕ್ಕೆ ಕೇವಲ 2.7 ರೇಟಿಂಗ್ ಸಿಕ್ಕಿದೆ. ಅದರರ್ಥ ಹೆಚ್ಚಿನ ಜನರಿಗೆ ಇದು ಇಷ್ಟವಾಗಿಲ್ಲ.

ಐಸ್‌ಲ್ಯಾಂಡ್‌ನ ‘ಹಕಲ್’ ಹೆಸರಿನ ಖಾದ್ಯವು ಈ ಪಟ್ಟಿಯಲ್ಲಿ ಕೆಟ್ಟ ಆಹಾರ ಎಂಬ ಕುಖ್ಯಾತಿ ಪಡೆದುಕೊಂಡಿದೆ. ಇದನ್ನು ಶಾರ್ಕ್ ಮಾಂಸದಿಂದ ತಯಾರಿಸಲಾಗುತ್ತದೆ. ಮಾಂಸವನ್ನು ಮೊದಲು ಒಣಗಿಸಿ ನಂತರ ಮೂರು ತಿಂಗಳ ಕಾಲ ಹುದುಗಿಸಲಾಗುತ್ತದೆ. ಇದನ್ನು ಸ್ಥಳೀಯ ಪಾನೀಯ ‘ಬ್ರೆನಿವಿನ್’ ನೊಂದಿಗೆ ಟೂತ್‌ಪಿಕ್‌ನಲ್ಲಿ ಬಡಿಸಲಾಗುತ್ತದೆ. ಐಸ್‌ಲ್ಯಾಂಡ್‌ನಲ್ಲಿ ವಾಸಿಸುವ ಜನರು ಇದನ್ನು ರುಚಿಕರವಾದ ಭಕ್ಷ್ಯವೆಂದು ಪರಿಗಣಿಸಿದ್ದರೂ, ಹೆಚ್ಚಿನ ಅಮೋನಿಯಾ ಅಂಶದಿಂದಾಗಿ ಪ್ರವಾಸಿಗರು ಇದನ್ನು ತಿನ್ನುವುದು ತುಂಬಾ ಕಷ್ಟ.

ಜಗತ್ತು ಸುತ್ತಲು ಹೊರಟವರು ಈ ಕೆಟ್ಟ ತಿನಿಸುಗಳ ಪಟ್ಟಿಯನ್ನೊಮ್ಮೆ ನೋಡಲೇಬೇಕು. ಈ ಪಟ್ಟಿಯಲ್ಲಿ ಪ್ರತಿ ದೇಶದ ಪ್ರಸಿದ್ಧ ಆಹಾರದ ಬಗ್ಗೆ ಮತ್ತು ಬಹುಶಃ ಯಾರೂ ತಿನ್ನಲು ಸಾಧ್ಯವಾಗದ ಕೆಲವು ಆಹಾರಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...