alex Certify ʼಸ್ಪೋರ್ಟ್ಸ್‌ ಹರ್ನಿಯಾʼ ದಿಂದ ಬಳಲ್ತಿದ್ದಾರೆ ಈ ಖ್ಯಾತ ಕ್ರಿಕೆಟರ್‌, ಇಲ್ಲಿದೆ ಕಾಯಿಲೆ ಕುರಿತ ಸಂಪೂರ್ಣ ಡಿಟೇಲ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಪೋರ್ಟ್ಸ್‌ ಹರ್ನಿಯಾʼ ದಿಂದ ಬಳಲ್ತಿದ್ದಾರೆ ಈ ಖ್ಯಾತ ಕ್ರಿಕೆಟರ್‌, ಇಲ್ಲಿದೆ ಕಾಯಿಲೆ ಕುರಿತ ಸಂಪೂರ್ಣ ಡಿಟೇಲ್ಸ್‌…!

ಟೀಂ ಇಂಡಿಯಾದ ಅದ್ಭುತ ಬ್ಯಾಟ್ಸ್‌ಮನ್‌ ಎಂದೇ ಹೆಸರಾಗಿರೋ ಸೂರ್ಯ ಕುಮಾರ್ ಯಾದವ್‌ ಸ್ಪೋರ್ಟ್ಸ್‌ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಸಾಮಾನ್ಯ ಹರ್ನಿಯಾದಂತೆಯೇ ಇರುತ್ತದೆ. ಆದರೆ ಹೆಚ್ಚಾಗಿ ಕ್ರೀಡಾಪಟುಗಳಲ್ಲಿ ಕಂಡುಬರುತ್ತದೆ.

ಸ್ಪೋರ್ಟ್ಸ್‌ ಹರ್ನಿಯಾದಿಂದ ಆಟಗಾರರು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ಚಟುವಟಿಕೆಗಳನ್ನು ಸರಳವಾಗಿ ಮಾಡಲು ಸಾಧ್ಯವಾಗುವುದಿಲ್ಲ. ರನ್ನಿಂಗ್‌ ಮತ್ತು ವ್ಯಾಯಾಮದ ಸಮಯದಲ್ಲಿ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಕೀಲುಗಳಲ್ಲೂ ಸಮಸ್ಯೆಗಳಾಗಬಹುದು. ಪರಿಣಾಮ ಅದು ಹರಿದುಹೋಗುತ್ತದೆ ಅಥವಾ ಗಾಯಗೊಳ್ಳುತ್ತದೆ.

ಈ ವೈದ್ಯಕೀಯ ಸ್ಥಿತಿಯನ್ನು ಸ್ಪೋರ್ಟ್ಸ್‌ ಹರ್ನಿಯಾ ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಸಮಸ್ಯೆ ಬಿಗಡಾಯಿಸಬಹುದು. ಅಥ್ಲೀಟ್‌ಗಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.

ಕ್ರಿಕೆಟಿಗ ಸೂರ್ಯಕುಮಾರ್ ಯಾದವ್‌ ಸ್ಪೋರ್ಟ್ಸ್‌ ಹರ್ನಿಯಾದಿಂದ ಬಳಲುತ್ತಿರುವುದು ಖಚಿತವಾಗುತ್ತಿದ್ದಂತೆ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಸದ್ಯದಲ್ಲೇ ಸೂರ್ಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಕೆಲ ಸಮಯ ಅವರು ಕ್ರಿಕೆಟ್‌ ಆಡಲು ಸಾಧ್ಯವಾಗುವುದಿಲ್ಲ.

ಸ್ಪೋರ್ಟ್ಸ್‌ ಹರ್ನಿಯಾ ಎಂದರೇನು ?

ಈ ಕಾಯಿಲೆಯನ್ನು ಅಥ್ಲೆಟಿಕ್ ಪುಬಲ್ಜಿಯಾ ಎಂದೂ ಕರೆಯಲಾಗುತ್ತದೆ. ಹೊಟ್ಟೆಯ ಕೆಳಭಾಗದಲ್ಲಿ ಗಾಯಗಳಾಗುತ್ತವೆ. ಅದು ದೀರ್ಘಕಾಲದ ನೋವನ್ನು ಉಂಟುಮಾಡಬಹುದು. ಇದರ ಆರಂಭಿಕ ಲಕ್ಷಣವೆಂದರೆ ಎದೆಯಲ್ಲಿ ಸುಡುವ ಸಂವೇದನೆ. ಜೊತೆಗೆ ವಿಪರೀತ ನೋವು ಕಾಡುತ್ತದೆ. ಹರ್ನಿಯಾ ಮತ್ತು ಸ್ಪೋರ್ಟ್ಸ್‌ ಹರ್ನಿಯಾದ ರೋಗಲಕ್ಷಣಗಳು ಸಾಮಾನ್ಯವಾಗಿವೆ. ಆದರೆ ಕೆಳ ಹೊಟ್ಟೆ ಮತ್ತು ಸೊಂಟದಲ್ಲಿ ಸೌಮ್ಯವಾದ ನೋವು ಬರುತ್ತದೆ. ಅಂಗಾಂಶಗಳಿಗೆ ಹಾನಿಯಾಗಲು ಪ್ರಾರಂಭಿಸುತ್ತವೆ.

ಸ್ಪೋರ್ಟ್ಸ್‌ ಹರ್ನಿಯಾಗೆ ಪರಿಹಾರವೇನು ?

ಈ ಕಾಯಿಲೆಯಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಪ್ರಾರಂಭವಾಗುತ್ತದೆ. ಅದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ ಗಂಭೀರ ಸ್ವರೂಪವನ್ನು ಪಡೆಯಬಹುದು. ವಿಶ್ರಾಂತಿ, ದೈಹಿಕ ಚಿಕಿತ್ಸೆ ಅತ್ಯಂತ ಅಗತ್ಯ. ಕಾಯಿಲೆ ಗಂಭೀರ ಸ್ವರೂಪವನ್ನು ಪಡೆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಸ್ಪೋರ್ಟ್ಸ್‌ ಹರ್ನಿಯಾ ಗುಣವಾಗಲು ಸಮಯ ತೆಗೆದುಕೊಳ್ಳಬಹುದು. ಆಧುನಿಕ ಚಿಕಿತ್ಸೆಯಿಂದ ಅದರ ರೋಗಲಕ್ಷಣಗಳನ್ನು 6-8 ವಾರಗಳಲ್ಲಿ ಗುಣಪಡಿಸಬಹುದು. ಹರ್ನಿಯಾದಿಂದ ಚೇತರಿಸಿಕೊಂಡ ನಂತರ  ಆಟಗಾರರು 6-12 ವಾರಗಳ ವಿಶ್ರಾಂತಿ ಬಳಿಕ ಆಟಕ್ಕೆ ಮರಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...