alex Certify ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…!

ತುಳಸಿ ಎಲೆಯ ಹತ್ತಾರು ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುಳಸಿಯಲ್ಲಿ ಪರಿಹಾರವಿದೆ. ಅದರಲ್ಲೂ ವಿಶೇಷವಾಗಿ ತುಳಸಿ ಕಷಾಯವನ್ನು ನಿಯಮಿತವಾಗಿ ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದನ್ನು ನೋಡೋಣ.

ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸೋಸಿಕೊಂಡು ಕುಡಿಯಬೇಕು. ಈ ತುಳಸಿ ಕಷಾಯ ಶೀತ, ಕೆಮ್ಮು ಮತ್ತು ಕಫವನ್ನು ನಿವಾರಿಸುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ನಿಯಮಿತವಾಗಿ ತುಳಸಿ ಕಷಾಯ ಕುಡಿಯುವುದು ಸೂಕ್ತ. ಇದು ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಸೋಂಕುಗಳಿಂದ ದೂರವಿಡುತ್ತದೆ. ಪ್ರತಿದಿನ ಬೆಳಗ್ಗೆ ತುಳಸಿ ಕಷಾಯ ಸೇವಿಸಬಹುದು.

ಈ ಕಷಾಯವು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ದೇಹದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಇದು ಸಹಕಾರಿಯಾಗಿದೆ. ಗಂಟಲು ನೋವಿನ ಸಮಸ್ಯೆ ಕೂಡ ತುಳಸಿ ಕಷಾಯ ಕುಡಿಯುವುದರಿಂದ ನಿವಾರಣೆಯಾಗುತ್ತದೆ.

ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾರೆ. ಅಂಥವರು ತುಳಸಿ ಕಷಾಯವನ್ನು ಕುಡಿಯುವುದರಿಂದ ತೂಕವನ್ನು ನಿಯಂತ್ರಿಸಬಹುದು. ಇನ್ನು ತಲೆನೋವಿಗೆ ಕೂಡ ಇದು ರಾಮಬಾಣ. ವಿಪರೀತ ತಲೆನೋವಿದ್ದಾಗ ನಾಲ್ಕಾರು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿಕೊಂಡು ಕುಡಿಯಿರಿ. ತಕ್ಷಣವೇ ತಲೆನೋವು ಮಾಯವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...