alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಈ ಚಿರತೆಗೆ ಆಮೆಯೇ ಆತ್ಮೀಯ ಗೆಳೆಯ

ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಸ್ನೇಹಿತರಿರುತ್ತಾರೆ ಎಂಬುದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಈಗ ಅಚ್ಚರಿಯ ಗೆಳೆತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಿರತೆಯೊಂದು ಆಮೆಯೊಂದಿಗೆ ಸುತ್ತಾಡುತ್ತಿರುವ ವಿಡಿಯೊ ಆನ್​ಲೈನ್​ನಲ್ಲಿ ಕಾಣಿಸಿಕೊಂಡಾಗ, ಅದು ವೈರಲ್​ ಆಗಿದೆ.

ಇದನ್ನು ಕಾರ್ಸನ್ಸ್​ ಸ್ಪ್ರಿಂಗ್ಸ್​ ವೈಲ್ಡ್​ಲೈಫ್​ ಎಂಬ ಇನ್​ಸ್ಟಾ ಪೇಜ್​ನಲ್ಲಿ ಹಂಚಿಕೊಂಡಿದೆ. ಇದು ಫ್ಲೋರಿಡಾದ ಗೈನೆಸ್ವಿಲ್ಲೆಯಲ್ಲಿರುವ ಪ್ರಾಣಿ ಉದ್ಯಾನವಾಗಿದೆ. ಚಿಕ್ಕ ಕ್ಲಿಪ್​ನಲ್ಲಿ, ಚಿರತೆಯು ತನ್ನ ತಲೆಯನ್ನು ಆಮೆಯ ಚಿಪ್ಪಿನ ಮೇಲೆ ಪ್ರೀತಿಯಿಂದ ಉಜ್ಜುತ್ತಿರುವುದನ್ನು ಕಾಣಬಹುದು.

ಆಮೆ ಮತ್ತು ಚಿರತೆ ಇಬ್ಬರೂ ಉತ್ತಮ ಸ್ನೇಹಿತರು. ಕಾರ್ಸನ್​ ಸ್ಪ್ರಿಂಗ್ಸ್​ನಲ್ಲಿ ಅವರನ್ನು ನೋಡಲು ಬನ್ನಿ ಎಂದು ಪೋಸ್ಟ್​ನ ಶೀರ್ಷಿಕೆ ಇದೆ.

ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ನೆಟಿಜನ್​ಗಳು ಅವರ ಸ್ನೇಹದ ಬಗ್ಗೆ ಆತಂಕಿತರಾಗಿದ್ದು, ಕಾಮೆಂಟ್​ ವಿಭಾಗದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ವಿರೋಧಾಬಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...