alex Certify OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಕುದುರೆಯ ವಿರುದ್ಧ 22 ಮೈಲಿ ಓಡಿ ಸ್ಪರ್ಧೆ ಗೆದ್ದ ವ್ಯಕ್ತಿ….!

ಮನುಷ್ಯನು ಕುದುರೆಯನ್ನು ಮೀರಿಸಿ ಓಡಲು ಸಾಧ್ಯವೇ ? ಬ್ರಿಟಿಷ್ ಓಟಗಾರ ರಿಕಿ ಲೈಟ್‌ಫೂಟ್ ಇದು ಸಾಧ್ಯ ಮಾಡಬಹುದು ಎಂದು ಸಾಬೀತುಪಡಿಸಿದ್ದಾರೆ.

ಲೈಟ್‌ಫೂಟ್ ವಾರಾಂತ್ಯದಲ್ಲಿ ವೇಲ್ಸ್‌ನ ಲಾನ್‌ವರ್ಟಿಡ್ ವೆಲ್ಸ್‌ನಲ್ಲಿ ನಡೆದ ಮ್ಯಾನ್ ವರ್ಸಸ್ ಹಾರ್ಸ್ ರೇಸ್ ಅನ್ನು ಗೆದ್ದ ಮೂರನೇ ವ್ಯಕ್ತಿ ಎನಿಸಿಕೊಂಡರು.

ಲೈಟ್‌ಫೂಟ್ ಕೇವಲ ಎರಡು ಗಂಟೆ 22 ನಿಮಿಷ 23 ಸೆಕೆಂಡುಗಳಲ್ಲಿ ಕುದುರೆಯನ್ನು ಸೋಲಿಸಿ ಸಾಧನೆ ಮಾಡಿದರು. ಸ್ಪರ್ಧೆ ಗೆಲ್ಲುವುದು ಮತ್ತು ಕುದುರೆಯನ್ನು ಸೋಲಿಸುವುದು ಅದ್ಭುತವೆನಿಸಿದೆ ಎಂದು ಅಭಿಪ್ರಾಯಪಟ್ಟರು. ಸ್ಪರ್ಧೆ ಗೆದ್ದಿದ್ದಕ್ಕೆ ಅವರು‌ £ 3,500 ಬಹುಮಾನವಾಗಿ ಪಡೆದರು.

ಹೀದರ್ ಫೆಲ್ ಒಲಿಂಪಿಯನ್ ಮತ್ತು ಬೆಳ್ಳಿ ಪದಕ ವಿಜೇತೆ, ಮೂರು ಗಂಟೆ ಎರಡು ನಿಮಿಷ ಮತ್ತು 52 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದ ಎರಡನೇ ಅತಿ ವೇಗದ ಮಹಿಳೆ.

ವೆಲ್ಷ್ ಗ್ರಾಮೀಣ ಪ್ರದೇಶದಲ್ಲಿ ನಡೆದ 22 ಮೈಲುಗಳ ಓಟದಲ್ಲಿ 60 ಕುದುರೆಗಳು ಮತ್ತು ಸವಾರರ ತಂಡದ ವಿರುದ್ಧ 1200 ಭಾಗವಹಿಸುವವರು ಇದ್ದರು. ಕಡಿದಾದ ಬೆಟ್ಟ ಮತ್ತು ಕೆಸರು ಭೂಪ್ರದೇಶವು ಓಟಗಾರರಿಗೆ ಸವಾಲುಗಳನ್ನು ಒಡ್ಡಿತ್ತು.

— Trail & Ultra Running Wales (@UltraWales) June 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...