alex Certify ಕೇವಲ 10 ಸೆಕೆಂಡ್‌ ಗಳಲ್ಲಿ ‌ʼಟೈʼ ಕಟ್ಟಿಕೊಳ್ಳಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 10 ಸೆಕೆಂಡ್‌ ಗಳಲ್ಲಿ ‌ʼಟೈʼ ಕಟ್ಟಿಕೊಳ್ಳಲು ಇಲ್ಲಿದೆ ಟಿಪ್ಸ್

ಮಹಾನಗರಗಳ ಬಹುರಾಷ್ಟ್ರೀಯ ಕಂಪನಿಗಳ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ಫಾರ್ಮಲ್​ ಡ್ರೆಸ್ ​ಕೋಡ್​, ಟೈ ಬಳಕೆ ಸಾಮಾನ್ಯ. ಆದರೆ ಈ ಟೈ ಕಟ್ಟಿಕೊಳ್ಳುವುದು ಬಹುತೇಕರಿಗೆ ಕಿರಿಕಿರಿ ವಿಷಯ.

ಆದರೆ ಇಲ್ಲೊಂದು ವಿಡಿಯೋ ವೈರಲ್​ ಆಗಿದ್ದು, ಕೇವಲ 10 ಸೆಕೆಂಡ್​ ಒಳಗಾಗಿ ಟೈ ಸುತ್ತು ಬರಿಸಿ ಕಟ್ಟಿಕೊಳ್ಳಲು ಸಿದ್ಧಮಾಡಿಕೊಳ್ಳಲು ಟೆಕ್ನಿಕ್​ ತಿಳಿಸಿಕೊಡಲಾಗಿದೆ.

ವ್ಯಕ್ತಿಯೊಬ್ಬ ತನ್ನ ಅಂಗೈನಲ್ಲಿ ಟೈಯನ್ನು ಎರಡು ಸುತ್ತುಬರಿಸಿ, ಪರಿರ್ಪೂಣವಾದ ಗಂಟು ರಚಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಟೈ ಹಾಕಿಕೊಳ್ಳುವುದು ಇಷ್ಟೊಂದು ಸಲೀಸಾ ಎಂದೆನಿಸುತ್ತದೆ. ಈ ವಿಧಾನದಿಂದ ಕಚೇರಿಗೆ ತಯಾರಾಗುತ್ತಿರುವಾಗ ಟೈಕಟ್ಟಿಕೊಳ್ಳಲು ಹೆಚ್ಚುವರಿ ಸಮಯವನ್ನು ಕಳೆಯುವ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಎಂದು ಸಂದೇಶ ನೀಡಲಾಗಿದೆ.

ಈ ವಿಡಿಯೋ ವೈರಲ್​ ಆಗಿದ್ದು 4 ಮಿಲಿಯನ್​ ವೀಕ್ಷಣೆ ಕಂಡಿದೆ. “ನನ್ನ ಬೆಳಗಿನ ಸಮಯವು ಇದರಿಂದ ತುಂಬಾ ಸುಲಭವಾಗುತ್ತದೆ’ ಎಂದು ಒಬ್ಬ ಟ್ವೀಟ್​ ಬಳಕೆದಾರರು ವಿಡಿಯೊವನ್ನು ಶೇರ್​ ಮಾಡಿದ್ದಾರೆ. ಮತ್ತೊಬ್ಬರು “ನನ್ನ ಸಂರ್ಪೂಣ ಶಾಲಾ ವೃತ್ತಿ ಜೀವನ ಎಲ್ಲಿತ್ತು’ ಎಂದು ಕಾಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...