alex Certify ಮಹಿಳೆ ವಾಟ್ಸಾಪ್ ಹ್ಯಾಕ್ ಮಾಡಿ ಪತಿಗೆ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ವಾಟ್ಸಾಪ್ ಹ್ಯಾಕ್ ಮಾಡಿ ಪತಿಗೆ ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಗೋಕಾಕ್ ಮಹಿಳೆಯೊಬ್ಬರ ವಾಟ್ಸಾಪ್ ಹ್ಯಾಕ್ ಮಾಡಿ ದುಬೈನಲ್ಲಿರುವ ಅವರ ಪತಿಗೆ ಸಂದೇಶ ಕಳಿಸಿ ಹಣಕ್ಕಾಗಿ ಪೀಡಿಸಿದ್ದು, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋಕಾಕ್ ನಗರದ ಮಹಿಳೆಯೊಬ್ಬರ ವಾಟ್ಸಾಪ್ ಹ್ಯಾಕ್ ಮಾಡಿದ ವಂಚಕರು ದುಬೈನಲ್ಲಿ ನೆಲೆಸಿದ ಪತಿಗೆ ಸಂದೇಶ ಕಳಿಸಿದ್ದು, ನಿಮ್ಮ ಸಂಬಂಧಿ ಅಫ್ಜಲ್ ಅವರಿಗೆ ಹೃದಯಘಾತವಾಗಿ ಪರಿಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಹಣ ಬೇಕಿದ್ದು ಕೂಡಲೇ ವರ್ಗಾಯಿಸಿ ಎಂದು ತಿಳಿಸಿದ್ದಾರೆ. ಅಲ್ಲದೆ, ಅಶ್ಲೀಲ ಫೋಟೋಗಳನ್ನು ಕೂಡ ಕಳುಹಿಸಲಾಗಿದ್ದು, ಆತಂಕಗೊಂಡ ಪತಿ, ಪತ್ನಿಯ ಮತ್ತೊಂದು ನಂಬರ್ ಗೆ ಕರೆ ಮಾಡಿ ವಿಚಾರಿಸಿದಾಗ ವಾಟ್ಸಾಪ್ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಈ ಕುರಿತಾಗಿ ಮಹಿಳೆಯ ಸಹೋದರ ಸಿಇಎನ್ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...