alex Certify ಮಹಾರಾಷ್ಟ್ರದಲ್ಲಿ ಕದ್ದ ಬಸ್ ಕರ್ನಾಟಕದಲ್ಲಿ ಬಿಟ್ಟು ಪರಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ಕದ್ದ ಬಸ್ ಕರ್ನಾಟಕದಲ್ಲಿ ಬಿಟ್ಟು ಪರಾರಿ….!

ಅಪರಿಚಿತ ವ್ಯಕ್ತಿಯೊಬ್ಬ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಕಳವು ಮಾಡಿ ಅದನ್ನು ಕರ್ನಾಟಕದ ಗಡಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಲಾತೂರು ಬಳಿಯ ಔರಾದ್ ಶಹಜಾನೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಈ ಬಸ್ ಅನ್ನು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳವು ಮಾಡಲಾಗಿದ್ದು, ಅಪರಿಚಿತ ವ್ಯಕ್ತಿ ಕರ್ನಾಟಕದ ಗಡಿವರೆಗೆ ಚಲಾಯಿಸಿಕೊಂಡು ಬಂದಿದ್ದಾನೆ.

ಈ ಬಸ್ ಇದೀಗ 14 ಕಿ.ಮೀ ದೂರದ ಕರ್ನಾಟಕದ ಕೇಸರ್ ಜವಳಗಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಯಾರು ತೆಗೆದುಕೊಂಡು ಬಂದಿದ್ದಾರೆ ಹಾಗೂ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆ ಬಳಿಕ ಬಹಿರಂಗವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...