alex Certify ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….!

Thief starts dancing after robbing a hardware store in Uttar Pradesh. Video is viral - Trending News News

ಲಕ್ನೋ: ಹಾರ್ಡ್‌ವೇರ್ ಮಳಿಗೆಯೊಂದನ್ನು ದೋಚಿದ ಮೇಲೆ ಕಳ್ಳ ನೃತ್ಯ ಮಾಡಲು ಆರಂಭಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಅಲ್ಲಿ ಆತನಿಗೆ ಅಮೂಲ್ಯವಾಗಿದ್ದೇನಾದರೂ ಸಿಕ್ಕಿತು ಅಂತೀರಾ? ಉ.ಪ್ರದೇಶದ ಚಾಂದೌಲಿ ಮಾರುಕಟ್ಟೆ ಪ್ರದೇಶದಲ್ಲಿರುವ ಅಂಶು ಸಿಂಗ್ ಎಂಬವರ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಏ.16ರಂದು ಕನ್ನ ಹಾಕಿದ್ದ ವ್ಯಕ್ತಿ, ಆ ಬಳಿಕ ನೃತ್ಯ ಮಾಡಿದ್ದ.

ಸಿಸಿ ಟಿವಿಯಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ‘ನರ್ತಿಸುವ ಕಳ್ಳ’ನ ಸೆರೆಗೆ ಬಲೆ ಬೀಸಿದ್ದಾರೆ. ಬಹಳ ಸುಲಭವಾಗಿ ಅಂಗಡಿಗೆ ನುಗ್ಗಿದ ಆತ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡ.

ಆಗ ಸಿಸಿ ಟಿವಿ ಕ್ಯಾಮೆರಾ ಆತನಿಗೆ ಕಂಡಿದೆ. ಗಾಬರಿ ತೋರದೆ ಆತ ನೃತ್ಯ ಮಾಡಲು ಆರಂಭಿಸಿದ್ದ. ಆತ ಲೂಟಿಯನ್ನು ಸಂಭ್ರಮಿಸಿದನೇ? ಸೆರೆ ಸಿಕ್ಕ ಮೇಲೆ ಆತನೇ ಉತ್ತರ ನೀಡಬೇಕಿದೆ.

Big News: ಕೋವಿಡ್‌-19 ಕರ್ತವ್ಯ ನಿರ್ವಹಣೆಯಲ್ಲಿರೋ ಆರೋಗ್ಯ ಕಾರ್ಯಕರ್ತರ ವಿಮೆ ಯೋಜನೆ ವಿಸ್ತರಣೆ

ಮರುದಿನ ಅಂಗಡಿಗೆ ಬಂದಾಗಲೇ ಅಂಶು ಸಿಂಗ್‌ಗೆ ಕಳ್ಳತನದ ವಿಷಯ ಗೊತ್ತಾಗಿದೆ. ಸಿಸಿ ಟಿವಿ ಪರಿಶೀಲಿಸಿದಾಗ ಕಳ್ಳನ ನೃತ್ಯವೂ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...