alex Certify ಸ್ಕ್ಯಾನಿಂಗ್ ನಲ್ಲಿ ಕಳ್ಳನ ಅಸಲಿಯತ್ತು ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕ್ಯಾನಿಂಗ್ ನಲ್ಲಿ ಕಳ್ಳನ ಅಸಲಿಯತ್ತು ಬಯಲು

ಬೆಂಗಳೂರು: ಮಹಿಳೆಯರೇ ಚಿನ್ನದ ಸರ ಹಾಕಿಕೊಂಡು ನಗರ ಸುತ್ತುವ ಮುನ್ನ ಹುಷಾರ್ ಆಗಿರಿ. ಯಾಕೆಂದರೆ ಬೆಂಗಳೂರಿನಲ್ಲಿ ಎಂತೆಂಥ ಖತರ್ನಾಕ್ ಕಳ್ಳರಿದ್ದಾರೆ ಅನ್ನೋದನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ.
ಹೌದು, ಹೇಮಾ ಎಂಬ ಮಹಿಳೆಯ 70 ಗ್ರಾಂ ತೂಕದ ಚಿನ್ನದ ಸರವನ್ನು ಖದೀಮರು ಎಗರಿಸಲು ಮುಂದಾಗಿದ್ದಾರೆ.

ವಿಜಯ್ ಎಂಬ ಆರೋಪಿಯು ಮಹಿಳೆಯ ಸರವನ್ನು ಹಿಡಿಯುತ್ತಲೇ, ಆಕೆಯೂ ಕೂಡ ಸರ ಕದಿಯದಂತೆ ಕೈಯಲ್ಲಿ ಗಟ್ಟಿಯಾಗಿ ಹಿಡಿದಿದ್ದಾರೆ. ಆದರೆ ಆರೋಪಿ ವಿಜಯ್, ಹೇಮಾ ಕೈಯಿಂದ ಸರ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಅಷ್ಟೊತ್ತಿಗೆ ಸಾರ್ವಜನಿಕರು ಇದನ್ನು ಗಮನಿಸಿ ಇಬ್ಬರನ್ನು ಹಿಡಿದು ಒದೆ ಕೊಟ್ಟಿದ್ದಾರೆ.

ಮಾದಕ ದ್ರವ್ಯ ನೀಡಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ ಜಿಮ್ ಟ್ರೈನರ್​…!

ಇನ್ನೇನು ಸಾರ್ವಜನಿಕರಿಂದ ಒದೆ ತಿಂದು ಜೀವ ಹೋಗಬಹುದು ಎಂಬ ಭಯದಲ್ಲಿ ಚಿನ್ನದ ಸರವನ್ನೇ ಖತರ್ನಾಕ್ ಕಳ್ಳ ನುಂಗಿಬಿಟ್ಟಿದ್ದಾನೆ. ಕೂಡಲೇ ಆತನನ್ನು ಕೆಆರ್ ಮಾರ್ಕೆಟ್ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಇನ್ನು ಈ ಖತರ್ನಾಕ್ ಕಳ್ಳ ತಾನು ಸರ ಕದ್ದೇ ಇಲ್ಲ ಎಂದು ವಾದ ಮಾಡಿದ್ದಾನೆ. ಹೀಗಾಗಿ ಈತನನ್ನು ಆಸ್ಪತ್ರೆಗೆ ದಾಖಲಿಸಿದಾಗ ಸ್ಕ್ಯಾನಿಂಗ್ ನಲ್ಲಿ ಚಿನ್ನದ ಸರ ನುಂಗಿರುವುದು ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...