alex Certify ಮಾದಕ ದ್ರವ್ಯ ನೀಡಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ ಜಿಮ್ ಟ್ರೈನರ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾದಕ ದ್ರವ್ಯ ನೀಡಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ ಜಿಮ್ ಟ್ರೈನರ್​…!

ಇಬ್ಬರು ಮಕ್ಕಳ ತಾಯಿಗೆ ಜಿಮ್​ ಮಾಲೀಕ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಗೆ ಬ್ಲಾಕ್​ಮೇಲ್​ ಮಾಡಿದ ಘಟನೆಯು ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣದ ಆರೋಪಿಯನ್ನು ಹರಗೋವಿಂದಪುರ ನಿವಾಸಿ ಧರ್ಮೀಂದ್ರಕುಮಾರ್​ ಸನ್ನಿ ಎಂದು ಗುರುತಿಸಲಾಗಿದೆ. ಈತ ಜಸ್ಸಿಯಾನ್​ ರಸ್ತೆಯಲ್ಲಿ ಜಿಮ್​ನ್ನು ಹೊಂದಿದ್ದ. 38 ವರ್ಷದ ಮಹಿಳೆಯು 2015ರಿಂದ ಸನ್ನಿ ಜಿಮ್​ಗೆ ಸೇರಿಕೊಂಡಿದ್ದಳು. ಆದರೆ ಸನ್ನಿ ಈಕೆ ಹತ್ತಿರ ತನ್ನ ಬಳಿ ಇನ್ನೊಂದು ಜಿಮ್​ ಇದ್ದು ಅದರಲ್ಲಿ ಇನ್ನಷ್ಟು ಪರಿಕರ ಇದೆ ಎಂದು ಹೇಳಿಕೊಂಡಿದ್ದ. ಹೀಗಾಗಿ ಆಕೆಗೆ ಮತ್ತೊಂದು ಜಿಮ್​ನಲ್ಲಿ ತರಬೇತಿ ಆರಂಭವಾಗಿತ್ತು.

ದೂರುದಾರ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ಒಂದು ದಿನ ಆ ಜಿಮ್​​ನಲ್ಲಿ ಆಕೆಯನ್ನು ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಟ್ರೇನರ್​ ಕೂಡ ಆಗಿದ್ದ ಸನ್ನಿ ಆಕೆಗೆ ಕೆಲ ಮಾತ್ರೆ ಹಾಗೂ ಇಂಜೆಕ್ಷನ್ ​ನ್ನು ನೀಡಿದ. ಇದನ್ನು ಸ್ವೀಕರಿಸಿದಲ್ಲಿ ಒಳ್ಳೆಯ ಮೈಕಟ್ಟು ನಿಮ್ಮದಾಗಲಿದೆ ಎಂದು ಹೇಳಿದ್ದ. ಆದರೆ ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಅಲ್ಲದೇ ಆಕೆಯ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್​ ಮಾಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...