alex Certify ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪೇಮೆಂಟ್ಸ್ʼಗೆ ಸಂಬಂಧಪಟ್ಟ ವಿಷಯಗಳ ಕುರಿತಂತೆ RBI ನಿಂದ ಮಹತ್ವದ ಘೋಷಣೆ

ರಿಸರ್ವ್ ಬ್ಯಾಂಕ್ ಗವರ್ನರ್‌ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಒಂದಷ್ಟು ನಿರ್ಣಯಗಳಿಗೆ ಬರಲಾಗಿದೆ. ಬುಧವಾರ ತೆಗೆದುಕೊಂಡ ಈ ನಿರ್ಣಯಗಳಿಂದ ಪೇಮೆಂಟ್ಸ್‌ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎನ್ನಲಾಗಿದೆ.

ಮಹತ್ವದ ಘೋಷಣೆಗಳು ಇಂತಿವೆ:

ಒಂದು ಡಿವೈಸ್ ಯುಪಿಐ ವಾಲೆಟ್

– ಸಣ್ಣ ಮೊತ್ತ ಪಾವತಿಗೆ ಯುಪಿಐ ವಾಲೆಟ್‌

– ಅಂತರ್ಜಾಲವಿಲ್ಲದೆಯೂ ಆಫ್ಲೈನ್ ವಹಿವಾಟುಗಳು ಸಾಧ್ಯ.

– ಯುಪಿಐ ಮೂಲಕ ಸ್ಮಾರ್ಟ್‌ಫೋನ್ ಹಾಗೂ ಅಂತರ್ಜಾಲದ ನೆರವಿನಿಂದ ವಾಲೆಟ್‌ನಲ್ಲಿ ದುಡ್ಡು ಹಾಕುವುದು.‌

– ಗ್ರಾಹಕ ವ್ಯವಹಾರ ವೈಫಲ್ಯದ ಬಗ್ಗೆ ದೂರುವುದಿಲ್ಲ.

– ಬ್ಯಾಂಕ್ ಸರ್ವೇಗಳ ಮೇಲಿನ ಹೊರೆ ಇಳಿಸಲಾಗುವುದು, ಸಂಪನ್ಮೂಲಗಳ ಮೇಲಿನ ವೆಚ್ಚ ತಗ್ಗಿಸಲಾಗುವುದು.

– ಪ್ರೀಪೇಯ್ಡ್‌ ಉಪಕರಣಗಳಂತೆಯೇ ಆನ್‌-ಡಿವೈಸ್ ಯುಪಿಐ ವಾಲೆಟ್.

– ಯುಪಿಐ ವಹಿವಾಟಿನ 50% ಪಾವತಿ 200 ರೂ.ಗಳಿಗಿಂತ ಕಡಿಮೆ ಇದೆ.

– ಗ್ರಾಹಕರಿಗೆ ವಹಿವಾಟಿನ ಅನುಭವದಲ್ಲಿ ಯಾವುದೇ ಬದಲಾವಣೆ ಇಲ್ಲ.

– ಯುಪಿಐ ವಾಲೆಟ್‌ನಲ್ಲಿ ಸಣ್ಣ ಪಾವತಿಗಳಿಗೆ ನಿಗದಿತ ಮೊತ್ತದ ಮಿತಿ ಇಲ್ಲ.

BIG NEWS: JDS ಟಿಕೆಟ್ ಕೈತಪ್ಪಲು ‘ಮೈಸೂರು ಮಹಾರಾಜ’ರು ಕಾರಣ; ಸಂದೇಶ್ ನಾಗರಾಜ್ ಗಂಭೀರ ಆರೋಪ

ಫೋನ್‌ಗಳಿಗೆ ಫೀಚರ್‌ ಯುಪಿಐ:

– ದೇಶದಲ್ಲಿ ಸದ್ಯ ಇರುವ 44 ಕೋಟಿ ಚಂದಾದಾರರಿಗೆ ಇದು ವರದಾನವಾಗಲಿದೆ.

– ಅಂತರ್ಜಾಲ ಸಂಪರ್ಕವಿಲ್ಲದ ಫೋನ್‌ಗಳಿಗೆ ಯುಪಿಐ ಪಾವತಿ ಸೌಲಭ್ಯ.

– ಸ್ಯಾಂಡ್‌ಬಾಕ್ಸ್‌ ನಿಯಂತ್ರಣದ ಮೂಲಕ ರೀಟೇಲ್ ಪಾವತಿಗಳು.

– ಯುಪಿಐಗೆ ಸೇರುವ ಭವಿಷ್ಯದ ಫೋನ್ ಗ್ರಾಹಕರಿಗೆ ಬಿಎನ್‌ಪಿಎಲ್ ಅರ್ಹತೆ.

– ಡಿಜಿಟಲ್ ಪಾವತಿಗಳ ಶುಲ್ಕಗಳನ್ನು ಎಲ್ಲರ ಕೈಗೆಟುಕುವಂತೆ ಮಾಡುವುದು.

– ಡೆಬಿಟ್‌/ಕ್ರೆಡಿಟ್ ಕಾಡ್‌ಗಳು ಹಾಗೂ ಪಿಪಿಐ ಮೇಲಿನ ಚರ್ಚಾ ಪ್ರತಿಗಳನ್ನು ವಿತರಿಸಲಾಗುವುದು.

– ವರ್ತಕರೊಂದಿಗೆ ಲಿಂಕ್ ಆದ ಎಂಡಿಆರ್‌ ಶುಲ್ಕಗಳ ಪರಿಗಣಿಸಲಾಗುವುದು.

– ಎಂಡಿಆರ್‌ ವರ್ತಕರ ಶುಲ್ಕಗಳನ್ನು ಸೇವಾದಾರರು ಭರಿಸಬೇಕಾಗುತ್ತದೆ.

– ಪೇಮೆಂಟ್‌ಗಳ ಮೇಲೆ ಮಾಡಲಾಗುವ ಕಂಬೈನ್ಡ್ ಶುಲ್ಕ ಹಾಗೂ ಸರ್ಚ್ ಶುಲ್ಕಗಳ ಮೇಲೆ ಫೀಡ್‌ಬ್ಯಾಕ್ ಪಡೆಯಲಾಗುವುದು.

ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಯುಪಿಐ ಮೂಲಕ ಹೂಡಿಕೆ 2 ಲಕ್ಷ ರೂನಿಂದ 5 ಲಕ್ಷ ರೂ.ಗೆ ಏರಿಕೆ

– ರೀಟೇಲ್ ನೇರ ಸ್ಕೀಂನಲ್ಲಿ ಹೂಡಿಕೆಯ ಮಿತಿಯನ್ನು ಎರಡು ಲಕ್ಷ ರೂಪಾಯಿಯಿಂದ ಐದು ಲಕ್ಷ ರೂ.ಗಳಿಗೆ ಏರಿಕೆ.

– ಜಿ-ಸೆಕ್ ಮೂಲಕ, ಯುಪಿಐ ಮುಖಾಂತರ ಐದು ಲಕ್ಷ ರೂ.ಗಳವರೆಗೆ ಹೂಡಿಕೆ ಸಾಧ್ಯತೆ.

– ಐಪಿಓ ಹೂಡಿಕೆ ಮೇಲೆ ಯುಪಿಐ ಮೂಲಕ ಹೂಡಿಕೆ ಮಿತಿಯನ್ನು ಐದು ಲಕ್ಷ ರೂ.ಗಳಿಗೆ ಏರಿಸಲಾಗುವುದು.

– ಎರಡು ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೂ ಎಚ್‌ಎನ್‌ಐನಲ್ಲಿ ಹೂಡಿಕೆ ಮಾಡಲು ಸೆಬಿ ಹೊಸ ಕೆಟಗರಿಯೊಂದನ್ನು ಅನ್ವೇಷಿಸುತ್ತಿದೆ.

ಇದೇ ವೇಳೆ, ರೆಪೋ ದರವನ್ನು 4 ಪ್ರತಿಶತದಲ್ಲಿ ಮುಂದುವರೆಸಲು ನಿರ್ಧರಿಸಿರುವ ಎಂಪಿಸಿ, ಹಿಮ್ಮುಖ ರೆಪೋ ದರದಲ್ಲೂ ಯಾವುದೇ ಬದಲಾವಣೆ ಮಾಡದೇ 3.5 ಪ್ರತಿಶತದಲ್ಲೇ ಇಡಲು ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...