alex Certify ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಈ ಮುಖದ ಚರ್ಮ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ.

*ಮುಖದ ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಸ್ಕ್ರಬ್ ಮಾಡುತ್ತೇವೆ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಉತ್ತಮ. ಆದರೆ ಪ್ರತಿದಿನ ಇದನ್ನು ಮಾಡುವುದರಿಂದ ಮುಖದ ಚರ್ಮದಲ್ಲಿ ಬಿರುಕು ಉಂಟಾಗುತ್ತದೆ.

*ಮುಖದ ಚರ್ಮವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಆಗಾಗ ಮುಖವನ್ನು ನೀರಿನಲ್ಲಿ ವಾಶ್ ಮಾಡಿ. ಇಲ್ಲವಾದರೆ ವಾತಾವರಣದ ಧೂಳು, ಮಾಲಿನ್ಯ ನಿಮ್ಮ ಮುಖದ ಚರ್ಮ ಬಿರುಕು ಬಿಡಲು ಕಾರಣವಾಗುತ್ತದೆ.

* ದೈಹಿಕ ಒತ್ತಡ ಹೆಚ್ಚಾದಾಗ ಚರ್ಮ ಬಿರುಕು ಬಿಡುತ್ತದೆ. ಹಾಗಾಗಿ ಸರಿಯಾಗಿ ನಿದ್ರೆ ಮಾಡಬೇಕು. ಇದರಿಂದ ಒತ್ತಡಕ್ಕೆ ಕಾರಣವಾಗುವ ಹಾರ್ಮೋನ್ ಬಿಡುಗಡೆ ಕಡಿಮೆಯಾಗುತ್ತದೆ.

*ನಿಮ್ಮ ಮುಖವನ್ನು ಆಗಾಗ ಕೈಗಳಿಂದ ಮುಟ್ಟುವುದರಿಂದ ಮುಖದ ಚರ್ಮದ ಮೇಲೆ ಉಗುರುಗಳಿಂದ ಗೀಚು ಬೀಳುತ್ತದೆ. ಅಲ್ಲದೇ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಮುಖಕ್ಕೆ ಸೇರಿ ಚರ್ಮದ ಬಿರುಕಿಗೆ ಕಾರಣವಾಗುತ್ತದೆ.

*ಸೌಂದರ್ಯ ವರ್ಧಕಗಳನ್ನು ಬಳಸುವಾಗ ಸರಿಯಾದದ್ದನ್ನು ಆರಿಸಿ ತನ್ನಿ. ಇಲ್ಲವಾದರೆ ಸೌಂದರ್ಯವರ್ಧಕಗಳಿಂದ ಮುಖದ ಚರ್ಮ ಹಾಳಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...