alex Certify ಕಪ್ಪೆಗಳ ಕಪಿಚೇಷ್ಟೆ….! ಒಂದೇ ಬಾಟಲಿ ಕ್ಯಾಪ್​ ಮೇಲೆ ತೇಲಲು ಪೈಪೋಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪೆಗಳ ಕಪಿಚೇಷ್ಟೆ….! ಒಂದೇ ಬಾಟಲಿ ಕ್ಯಾಪ್​ ಮೇಲೆ ತೇಲಲು ಪೈಪೋಟಿ

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ರಂಜನೀಯ ಕಂಟೆಂಟ್ ​ಗಳಿಗೇನು ಕೊರತೆ ಇಲ್ಲ. ಪ್ರಪಂಚದ ಮೂಲೆ ಮೂಲೆಗಳಿಂದ ವಿಷಯಗಳು ಜಾಲತಾಣಿಗರನ್ನು ಖುಷಿಪಡಿಸುತ್ತಲೇ ಇರುತ್ತವೆ.

ಇದೀಗ ನೆಟ್ಟಿಗರನ್ನು ಜೋರಾಗಿ ನಗುವಂತೆ ಮಾಡುವ ವಿಡಿಯೊ ವೈರಲ್​ ಆಗಿದೆ. ಬ್ಯುಟೆಂಗೆಬೀಡೆನ್​ ಹಂಚಿಕೊಂಡ ಕ್ಲಿಪ್​ನಲ್ಲಿ, ಕಪ್ಪೆಯು ಬಾಟಲಿಯ ಕ್ಯಾಪ್​ ಮೇಲೆ ತೇಲುತ್ತಿರುವಾಗ ಇನ್ನೊಂದು ಕಪ್ಪೆ ಅದನ್ನು ತಳ್ಳುತ್ತಿರುವುದನ್ನು ಕಾಣಬಹುದು.

ಚಿಕ್ಕ ವಿಡಿಯೊದಲ್ಲಿ ಕಪ್ಪೆಯು ಬಾಟಲಿಯ ಕ್ಯಾಪ್​ ಮೇಲೆ ತೇಲುತ್ತಿರುವುದನ್ನು ಕಾಣಬಹುದು. ಇನ್ನೊಂದು ಕಪ್ಪೆ ಕೂಡ ಆ ಕ್ಯಾಪ್​ ಮೇಲೆ ಏರಲು ಬಯಸಿದ್ದು, ಆದರೆ ಮೊದಲನೆಯದು ತನ್ನ ಸಣ್ಣ ಕಾಲಿನಿಂದ ಅದನ್ನು ಪಕ್ಕಕ್ಕೆ ತಳ್ಳಿದೆ. ಸಹಜವಾಗಿ ಇದನ್ನು ನೋಡಿದರೆ ಎಂತವರಿಗೂ ನಗು ತರಿಸುತ್ತದೆ. ಮನುಷ್ಯರ ನಿಜ ಜೀವನದಲ್ಲಿ ಸಹಜ ಎನಿಸುವಂತಹ ಕಾಲೆಳೆಯುವ, ಪೈಪೋಟಿ ನಡೆಸುವ ಕಾರ್ಯವನ್ನು ಈ ಒಂದು ಸಣ್ಣಸೀನ್​ ಹೋಲಿಕೆ ಮಾಡುವಂತಿದೆ. ಈ ವಿಡಿಯೋ 13 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...