alex Certify ಈ ಕಲ್ಲು ನಿಜಕ್ಕೂ ಗಾಳಿಯಲ್ಲಿ ತೇಲುತ್ತಿದೆಯೇ ? ಇದರ ಹಿಂದಿದೆ ಇಂಟ್ರಸ್ಟಿಂಗ್ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಲ್ಲು ನಿಜಕ್ಕೂ ಗಾಳಿಯಲ್ಲಿ ತೇಲುತ್ತಿದೆಯೇ ? ಇದರ ಹಿಂದಿದೆ ಇಂಟ್ರಸ್ಟಿಂಗ್ ಸಂಗತಿ

ಕಣ್ಣಿಗೆ ಕಾಣುವುದಕ್ಕೂ ಅಸಲಿ ಕಥೆಗೂ ಅಜಗಜಾಂತರ ಎನ್ನುವಷ್ಟು ವ್ಯತ್ಯಾಸ ಇರುವ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅದಾಗಲೇ ಭಾರೀ ಸುದ್ದಿ ಮಾಡಿವೆ.

ಕೆಲವೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವ ದೃಶ್ಯಗಳು ಸೃಷ್ಟಿಸುವ ಭ್ರಮೆಯ ಜಾಲವನ್ನು ಭೇದಿಸಲು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕಾಗುತ್ತದೆ. ಆದರೆ ಸತ್ಯ ಏನೆಂದು ತಿಳಿದಾಗ ’ಓ ಇಷ್ಟೇನಾ !?’ ಎಂದು ಅಚ್ಚರಿ ಪಡುವಂತೆ ಆಗಿಬಿಡುತ್ತದೆ.

“ನಿಮ್ಮ ಮನಸ್ಸಿನಲ್ಲಿ ದೃಷ್ಟಿ ಭ್ರಮಣೆ ಸೃಷ್ಟಿಸುವ ಈ ಚಿತ್ರವನ್ನು ಮೊದಲು ನೋಡಿದಾಗ ಇಲ್ಲಿ ಕಲ್ಲು ತೇಲುತ್ತಿರುವಂತೆ ಭಾಸವಾಗುತ್ತದೆ. ಆದರೆ…….” ಎಂದು ಕ್ಯಾಪ್ಷನ್ ಕೊಟ್ಟು ಹಾಕಲಾಗಿರುವ ಈ ಪೋಸ್ಟ್‌ನಲ್ಲಿರುವ ಚಿತ್ರದಲ್ಲಿರುವ ಕಲ್ಲು ನಿಜಕ್ಕೂ ನೆಲದಿಂದ 2-3 ಅಡಿ ಎತ್ತರದಲ್ಲಿ ತೇಲುತ್ತಿರುವಂತೆಯೇ ಭಾಸವಾಗುತ್ತಿದೆ.

ಆದರೆ ತೀರಾ ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ, ಅಸಲಿಗೆ ಈ ಕಲ್ಲು ಅರ್ಧ ನೀರಿನಲ್ಲಿ ಮುಳುಗಿದ್ದು, ನೀರಿನ ಮೇಲಿರುವ ಇನ್ನರ್ಧ ಕಲ್ಲಿನ ಪ್ರತಿಬಿಂಬ ನೀರಿನ ಮೇಲ್ಮೈಯಲ್ಲಿ ಪ್ರತಿಫಲಿಸಲ್ಪಟ್ಟು, ಅಲ್ಲೊಂದು ಪೂರ್ಣ ಪ್ರಮಾಣದ ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿದೆ. ಜಲಾಗರದ ನೀರು ಸ್ಫಟಿಕದಂತೆ ಸ್ಪಷ್ಟವಾಗಿರುವ ಕಾರಣ ಈ ಚಿತ್ರ ಹೀಗೊಂದು ದೃಷ್ಟಿ ಭ್ರಮಣೆ ಸೃಷ್ಟಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...