alex Certify 200 ಸ್ಕೈ ಡೈವರ್​ಗಳ ವರ್ಣರಂಜಿತ ಪ್ರದರ್ಶನ ನೋಡುವುದೇ ಕಣ್ಣಿಗೊಂದು ಹಬ್ಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

200 ಸ್ಕೈ ಡೈವರ್​ಗಳ ವರ್ಣರಂಜಿತ ಪ್ರದರ್ಶನ ನೋಡುವುದೇ ಕಣ್ಣಿಗೊಂದು ಹಬ್ಬ

200 ಸ್ಕೈಡೈವರ್​ಗಳು ಚಿಟ್ಟೆಗಳ ಹಿಂಡುಗಳಂತೆ ಗಾಳಿಯಲ್ಲಿ ತೇಲುವ ಅದ್ಭುತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೆೈರಲ್​ ಆಗುತ್ತಿದೆ.

ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸುವ ಉದ್ದೇಶದಿಂದ ವರ್ಣರಂಜಿತ ಉಡುಗೆ ತೊಟ್ಟ ಗುಂಪು ಸ್ಕೈ ಡೈವ್​ ಮಾಡಿದೆ. ಸ್ಕೈಡೈವರ್​ ಕರೀನ್​ ಜೋಲಿ ಅವರು ವಿಡಿಯೊವನ್ನು ಇನ್​ಸ್ಟಾದಲ್ಲಿ ಆ.26ರಂದು ಹಂಚಿಕೊಂಡಿದ್ದಾರೆ.

ಇದು ಸುಲಭದ ಸಾಧನೆಯಲ್ಲ. “ಆ ಡೈವಿಂಗ್​ ತಾಂತ್ರಿಕವಾಗಿವೆ, ತಲೆ ಕೆಳಗೆ ಹಾರಲು ತಿಳಿದಿರಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಶಾಂತವಾಗಿರಬೇಕಾಗುತ್ತದೆ. ಮೆಂಟಲ್​ ಗೇಮ್​ ಅದನ್ನು ಯಶಸ್ವಿಯಾಗಿಸುತ್ತದೆ” ಎಂದು ಅವರು ವಿವರಿಸಿದ್ದಾರೆ.

ಈ ವಿಡಿಯೋ ವೀಕ್ಷಕರನ್ನು ಅಚ್ಚರಿಗೆ ದೂಡುತ್ತದೆ. ಸಾವಿರಾರು ಅಡಿಗಳ ಎತ್ತರದಲ್ಲಿ ನಿಲ್ಲಲು ಆಗದ ಸ್ಥಿತಿಯಲ್ಲಿ ತೇಲುತ್ತಲೇ ರಚನೆಗಳನ್ನು ಮಾಡುವುದು, ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಕೆಲವು ಕ್ಷಣಗಳಲ್ಲಿ ಗುರಿ ಮುಟ್ಟುವ ಪ್ರಯತ್ನ ಅಚ್ಚರಿ ಮೂಡಿಸುತ್ತದೆ.

ಇತ್ತೀಚೆಗೆ, ಥಾಯ್ಲೆಂಡ್​ನಲ್ಲಿ ವಿಮಾನದಿಂದ 13,000 ಅಡಿಗಳಷ್ಟು ಎತ್ತರದಿಂದ ಬೀಳುವ ಸಂದರ್ಭದಲ್ಲಿ ಸ್ಕೈಡೈವರ್​ ರೂಬಿಕ್ಸ್​ ಕ್ಯೂಬ್​ ಪಿರಮಿಡ್​ ಪಝಲ್​ ಅನ್ನು ರಚಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...