alex Certify ಪ್ರಾಣಪ್ರತಿಷ್ಠೆಗೆ ಸಿದ್ಧವಾಗಿರೋ ರಾಮಲಲ್ಲಾ ವಿಗ್ರಹದಲ್ಲಿದೆ ಈ 9 ವಿಶೇಷತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಪ್ರತಿಷ್ಠೆಗೆ ಸಿದ್ಧವಾಗಿರೋ ರಾಮಲಲ್ಲಾ ವಿಗ್ರಹದಲ್ಲಿದೆ ಈ 9 ವಿಶೇಷತೆ…!

ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ದೇವರ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಈ ಕ್ಷಣಕ್ಕಾಗಿ ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗ್ಲೇ ರಾಮಲಲ್ಲಾ ವಿಗ್ರಹದ ಮೊದಲ ಫೋಟೋ ಕೂಡ ಬಹಿರಂಗವಾಗಿದೆ. ಈಗಾಗ್ಲೇ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಸ್ಥಾಪಿಸಲಾಗಿದೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ  ಶ್ರೀರಾಮನ ವಿಗ್ರಹ ಇದು. ಅಯೋಧ್ಯಾ ಧಾಮದ ಭವ್ಯ ದೇವಾಲಯದ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹ ಕಂಗೊಳಿಸುತ್ತಿದೆ. ಈ ವಿಗ್ರಹದ ವಿಶೇಷತೆಗಳನ್ನು ನೋಡೋಣ.

ರಾಮಲಲ್ಲಾ ವಿಗ್ರಹದ 9 ವಿಶೇಷತೆಗಳು

– ವಿಗ್ರಹ ಕೆತ್ತನೆಗೆ ಬಳಸಿರುವ ಶ್ಯಾಮ ಶಿಲೆಯ ವಯಸ್ಸು ಸಾವಿರಾರು ವರ್ಷಗಳು, ಇದು ನೀರು ನಿರೋಧಕ.

– ಶ್ರೀಗಂಧ ಮತ್ತು ರೋಲಿಯನ್ನು ಹಚ್ಚುವುದರಿಂದ ವಿಗ್ರಹದ  ಹೊಳಪು ಮಾಸುವುದಿಲ್ಲ.

– ರಾಮಲಲ್ಲಾ ವಿಗ್ರಹದ ಎತ್ತರ ಕಾಲ್ಬೆರಳುಗಳಿಂದ ಹಣೆಯವರೆಗೆ 51 ಇಂಚುಗಳಷ್ಟಿದೆ.

– ರಾಮಲಲ್ಲಾ ವಿಗ್ರಹದ ತೂಕ ಸುಮಾರು 200 ಕೆ.ಜಿ.

– ಪ್ರತಿಮೆಯ ಮೇಲೆ ಕಿರೀಟ ಮತ್ತು ಪ್ರಭಾವಲಯ ಇರುತ್ತದೆ.

– ವಿಶೇಷತೆ ಎಂದರೆ ಶ್ರೀರಾಮನ ತೋಳುಗಳು ಮೊಣಕಾಲುಗಳವರೆಗೆ ಉದ್ದವಾಗಿವೆ.

– ಸುಂದರವಾದ ದೊಡ್ಡ ಕಣ್ಣುಗಳು, ಭವ್ಯವಾದ ಹಣೆ ಈ ಪ್ರತಿಮೆಯ ಆಕರ್ಷಣೆ.

– ಕಮಲದ ಹೂವಿನ ಮೇಲೆ ನಿಂತಿರುವ ಭಂಗಿಯಲ್ಲಿ ಪ್ರತಿಮೆಯಿದೆ, ರಾಮನ ಕೈಯಲ್ಲಿ ಬಿಲ್ಲು ಮತ್ತು ಬಾಣವಿದೆ.

– ವಿಗ್ರಹದಲ್ಲಿ ಐದು ವರ್ಷದ ಮಗುವಿನಂತಹ ಮೃದುತ್ವ.

ಶ್ಯಾಮ ಶಿಲೆಯಲ್ಲಿ ಮೂಡಿ ಬಂದಿರುವ ರಾಮಲಲ್ಲಾನ ವಿಗ್ರಹ ಅತ್ಯದ್ಭುತವಾಗಿದೆ. ಈ ಮೂರ್ತಿ ಕನ್ನಡಿಗ ಶಿಲ್ಪಿಯ ಕೈಯ್ಯಲ್ಲಿ ಅರಳಿದೆ ಎಂಬುದು ಮತ್ತೊಂದು ವಿಶೇಷತೆ. ರಾಮ ಲಲ್ಲಾನನ್ನು ಪ್ರತಿಷ್ಠಾಪಿಸುವ ಮೊದಲು ಅನೇಕ ಆಚರಣೆಗಳು ಮತ್ತು ಪೂಜೆಗಳನ್ನು ನಡೆಸಲಾಗಿದೆ. ಕಾಶಿಯಿಂದ ಬಂದಿದ್ದ ವಿದ್ವಾಂಸರು ಕಾರ್ಯಕ್ರಮ ನೆರವೇರಿಸಿದ್ದಾರೆ. ಮೂರ್ತಿಗೆ ಜಲಾಭಿಷೇಕ ಮಾಡಿ ಪ್ರತಿಷ್ಠಾಪಿಸಲಾಯಿತು.

ಪ್ರಾಣ ಪ್ರತಿಷ್ಠೆಗೂ ಮೊದಲು ರಾಮಲಲ್ಲಾಗೆ ಕನ್ನಡಿಯನ್ನು ತೋರಿಸಲಾಗುತ್ತದೆ. ನಂತರ ವಿಗ್ರಹದ ಕಟ್ಟು ತೆಗೆಯಲಾಗುತ್ತದೆ.  ಪ್ರಧಾನಿ ಸೇರಿ ಐವರು ಗರ್ಭಗುಡಿಯಲ್ಲಿ ಉಪಸ್ಥಿತರಿರುತ್ತಾರೆ. ಜನವರಿ 22 ರಂದು ದಳಪೂಜೆಗಾಗಿ ಆಚಾರ್ಯರ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರಧಾನಿಯವರ ಸಮ್ಮುಖದಲ್ಲಿ ಅಭಿಜಿತ್ ಮುಹೂರ್ತದಲ್ಲಿ ರಾಮಲಾಲಾ ಅವರ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...