alex Certify ಕುಖ್ಯಾತ ಮನೆಗಳ್ಳನ ಬಂಧಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತ ಮನೆಗಳ್ಳನ ಬಂಧಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ…?

ಬೆಂಗಳೂರು: ಸೋಲದೇವನಹಳ್ಳಿ ಠಾಣೆ ಪೋಲೀಸರು ಕುಖ್ಯಾತ ಮನೆಗಳ್ಳನನ್ನು ಬಂಧಿಸಿದ್ದಾರೆ. ದೊಡ್ಡಕೊಕ್ಕನಹಳ್ಳಿ ನಿವಾಸಿ ಮುನಿರಾಜು ಅಲಿಯಾಸ್ ಮುನಿ(30) ಬಂಧಿತ ಆರೋಪಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದ ನಿವಾಸಿಯಾಗಿರುವ ಮುನಿಯನ್ನು ಬಂಧಿಸಿದ ಪೊಲೀಸರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ನಗದು, ಬೈಕ್ ಜಪ್ತಿ ಮಾಡಿದ್ದಾರೆ.

ಆರೋಪಿ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣ, ನಂದಿನಿ ಲೇಔಟ್, ಗಿರಿನಗರ, ಹನುಮಂತನಗರ, ಜ್ಞಾನಭಾರತಿ ಪೊಲೀಸ್ ಠಾಣೆಗಳ ಸುತ್ತಮುತ್ತ ಆರೋಪಿ ಕೃತ್ಯವೆಸಗಿದ್ದ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...