alex Certify ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ ಜೊತೆಗೆ ಓಡಿ ಹೋಗಿರುವ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ತುಂಬು ಗರ್ಭಿಣಿ ಜೆಸ್‌ ಹಾಗೂ ಜಾರ್ಜಿನಾ ಮತ್ತಾಕೆಯ ಪತಿ ಎರಿಕ್ ಜೊತೆಗೆ ಗ್ಲೌಸೆಸ್ಟರ್‌ಶೈರ್‌ನ ಸ್ಟೋ-ಆನ್‌-ದಿ-ವಾಲ್ಡ್‌ ಮನೆಗೆ ತೆರಳಿದ ರ‍್ಯಾನ್‌‌ಗೆ ಈ ವಿಚಿತ್ರ ಮೋಹ ಬೆಳೆದಿದೆ. ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ ಜೆಸ್ ಮನೆಗೆ ಬಂದ ಬಳಿಕ, ರ‍್ಯಾನ್ ಹಾಗೂ ಆಕೆಯ ತಾಯಿ ಓಡಿ ಹೋಗಿರುವುದನ್ನು ಕಂಡಿದ್ದಾರೆ.

ಹಾಕಬಾರದ ಟ್ಯಾಟೂ ಹಾಕಿಸಿಕೊಂಡು ಪಶ್ಚಾತಾಪಪಟ್ಟ ಯುವತಿ….! ವೈರಲ್​ ಆಯ್ತು ವಿಡಿಯೋ

ಈ ವಿಚಾರವಾಗಿ ತನ್ನ ತಾಯಿಯನ್ನು ಕೇಳಿದ ಜೆಸ್‌ಗೆ, “ನಾವು ಯಾರೊಂದಿಗೆ ಮೋಹದಲ್ಲಿ ಬೀಳುತ್ತೇವೆ ಎನ್ನುವುದನ್ನು ನಿಯಂತ್ರಿಸಲು ಆಗುವುದಿಲ್ಲ,” ಎಂಬ ಸಮರ್ಥನೆ ಬಂದಿದೆ.

“ನಿನಗೆ ನಿಜ ಹೇಳಬೇಕೆಂದರೆ, ರ‍್ಯಾನ್‌ ಕಳೆದ ಮೂರು ವರ್ಷಗಳಿಂದ ನನ್ನನ್ನು ಬೀಳಿಸಿಕೊಳ್ಳಲು ನೋಡುತ್ತಿದ್ದು ಕಳೆದ ಆರು ತಿಂಗಳಿನಿಂದ ನಾನು ಆತನಿಗೆ ಸೋತಿದ್ದೇನೆ. ಆತ ನನಗೆ ನಿನ್ನ ಸಂದೇಶಗಳನ್ನು ತೋರಿಸಿ, ಎಲ್ಲವನ್ನೂ ಹೇಳುತ್ತಾನೆ. ನಾವು ಎಷ್ಟು ಕ್ಲೋಸ್ ಇದ್ದೆವೆಂದು ನಿನಗೆ ಗೊತ್ತಿಲ್ಲ. ಆತನ ಇಹಪರವೆಲ್ಲಾ ನನಗೆ ಚೆನ್ನಾಗಿ ಗೊತ್ತು” ಎಂದು ಕಿರು ಸಂದೇಶಗಳ ಮೂಲಕ ಜಾರ್ಜಿನಾ ತನ್ನ ಮಗಳು ಜೆಸ್‌ಗೆ ತಿಳಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...