alex Certify ಇಂದು ರಿಲೀಸ್ ಆಗಲಿದೆ ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ರಿಲೀಸ್ ಆಗಲಿದೆ ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್

Mr ನಟ್ವರ್ ಲಾಲ್'ನಲ್ಲಿ ಬನಾರಸ್​​ ನಟಿ ಸಖತ್ ಬೋಲ್ಡ್​; 'ಅಚ್ಚಚ್ಚೋ ಅಚ್ಚು ಮೆಚ್ಚಿವಳು' - News First Live

ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಿ ಲಾವ ನಿರ್ದೇಶನದ  ‘mr ನಟ್ವರ್ ಲಾಲ್’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.

ಈ ಚಿತ್ರದಲ್ಲಿ ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂಟೈರೊ ಪ್ರಮುಖ ಪಾತ್ರದಲ್ಲಿದ್ದು, ಯಶ್ ಶೆಟ್ಟಿ, ರಾಜೇಶ್ ನಟರಂಗ, ನಾಗಭೂಷಣ, ಕಾಕ್ರೋಜ್ ಸುಧಿ, ರಘು ರಾಮನಕೊಪ್ಪ, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಹರಿಣಿ ಶ್ರೀಕಾಂತ್, ಉಳಿದ ಪಾತ್ರವರ್ಗದಲ್ಲಿದ್ದಾರೆ. ಧರ್ಮ ವಿಶ್ ಸಂಗೀತ ಸಂಯೋಜನೆ ನೀಡಿದ್ದಾರೆ. ನಟ ತನು ಶಿವಣ್ಣ ಅವರೇ ತನುಷ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನವಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...