alex Certify ವಿಡಿಯೋ: ಮದುಮಗಳೊಂದಿಗೆ ನಿಂತಿದ್ದ ಮದುಮಗನ ಮೇಲೆ ಬಿದ್ದ ಸ್ಪೀಕರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಮದುಮಗಳೊಂದಿಗೆ ನಿಂತಿದ್ದ ಮದುಮಗನ ಮೇಲೆ ಬಿದ್ದ ಸ್ಪೀಕರ್‌

ಸಾಮಾಜಿಕ ಜಾಲತಾಣದಲ್ಲಿ ಏನೇನೆಲ್ಲಾ ವಿಡಿಯೋ ನೋಡುತ್ತೀರಿ ಎಂದು ಹೇಳಲು ಬರುವುದಿಲ್ಲ. ಮದುವೆ ಸಮಾರಂಭವೊಂದರಲ್ಲಿ ಮದುಮಗಳ ಜೊತೆಗೆ ನಿಂತಿದ್ದ ಮದುಮಗನ ಮೇಲೆ ಸ್ಪೀಕರ್‌ ಒಂದು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ.

ಟ್ವಿಟರ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಸ್ವಾತಿ ಚತುರ್ವೇದಿ ಶೇರ್‌ ಮಾಡಿದ್ದಾರೆ. ’ತೇರಿ ಓರೆ’ ಎಂಬ ರೊಮ್ಯಾಂಟಿಕ್ ಹಾಡು ಮೂಡಿ ಬರುತ್ತಿದ್ದ ಸ್ಪೀಕರ್‌‌ ಇದ್ದಕ್ಕಿದ್ದಂತೆ ಮದುಮಗನ ಮೇಲೆ ಬಿದ್ದಿದೆ.

“ಸಂಗೀತವೇ ನಿಮಗೆ ಜೋರಾಗಿ ಹೊಡೆದರೆ,” ಎಂದು ಪೋಸ್ಟ್‌ಗೆ ಕ್ಯಾಪ್ಷನ್ ಕೊಡಲಾಗಿದೆ. ಆನ್ಲೈನ್‌ನಲ್ಲಿ ಶೇರ್‌ ಆದಾಗಿನಿಂದ ಈ ವಿಡಿಯೋವನ್ನು 72 ಸಾವಿರ ಮಂದಿ ವೀಕ್ಷಿಸಿದ್ದು, ಮದುಮಗನ ಪಾಡನ್ನು ಕಂಡು ನೆಟ್ಟಿಗರು ’ಅಯ್ಯೋ ಪಾಪ’ ಎಂದು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...