alex Certify ಮಾನವ ಮುಖ ಹೋಲುವ ಮರಿಗೆ ಜನ್ಮ‌ ನೀಡಿದ ಮೇಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ಮುಖ ಹೋಲುವ ಮರಿಗೆ ಜನ್ಮ‌ ನೀಡಿದ ಮೇಕೆ

ಮಾನವನಂತಿರುವ ಮರಿಗೆ ಮೇಕೆ ಜನ್ಮ ನೀಡಿರುವ ವಿಲಕ್ಷಣ ಘಟನೆ ನಡೆದಿದೆ. ಅಸ್ಸಾಂನ ಕಚರ್ ಜಿಲ್ಲೆಯ ಧೋಲೈ ವಿಧಾನಸಭಾ ಕ್ಷೇತ್ರದ ಗಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾನವನಂತಿರುವ ಮೇಕೆ ಮರಿಯನ್ನ ನೋಡಿದ ಮಾಲೀಕ ಹಾಗೂ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ‌.

ಈಸ್ಟ್ ಮೊಜೊ ವರದಿಯ ಪ್ರಕಾರ, ಮೇಕೆ ಮರಿ ಮಾನವರಂತಹ ಕಣ್ಣುಗಳು, ಮೂಗು ಮತ್ತು ಬಾಯಿಯೊಂದಿಗೆ ಜನಿಸಿತು, ಆದರೆ ಅದರ ಕಿವಿಗಳು ಮೇಕೆಯಂತೆ ಇತ್ತು. ಈ ಮರಿ ಎರಡು ಕೈಕಾಲುಗಳೊಂದಿಗೆ ಹುಟ್ಟಿದ್ದು ಬಾಲವಿರಲಿಲ್ಲ.

ಮಾನವನಂತಿರುವ ಪ್ರಾಣಿ ಜನನದ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಶಂಕರ್ ದಾಸ್ ಅವರ ಮನೆಗೆ ಧಾವಿಸಿದರು. ಹಲವರು ವಿರೂಪಗೊಂಡ ಮೇಕೆಯ ಫೋಟೋವನ್ನು ಸಹ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ದುರದೃಷ್ಟವಶಾತ್, ಮೇಕೆ ಮರಿ ಹುಟ್ಟಿದ ಕೆಲ ಗಂಟೆಗಳಲ್ಲೆ ಸಾವನ್ನಪ್ಪಿದೆ.

ಅದರ ಮಾಲೀಕರು ಮರಿಯ ಮೃತದೇಹವನ್ನ ಮಣ್ಣಿನಲ್ಲಿ ಹೂತಿದ್ದಾರೆ. ಅಲ್ಲದೆ, ತಾಯಿ ಮೇಕೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದು, ಅದು ಸಾಮಾನ್ಯ ಮೇಕೆಮರಿಗಳಂತಿದ್ದು, ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...