alex Certify ʼಫ್ಯಾಮಿಲಿ ಮ್ಯಾನ್ʼ​ ಸರಣಿಯ ಪ್ರಮುಖ ಗುಟ್ಟೊಂದನ್ನು ಬಿಚ್ಚಿಟ್ಟ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫ್ಯಾಮಿಲಿ ಮ್ಯಾನ್ʼ​ ಸರಣಿಯ ಪ್ರಮುಖ ಗುಟ್ಟೊಂದನ್ನು ಬಿಚ್ಚಿಟ್ಟ ನಟ

ಅಮೆಜಾನ್​ ಪ್ರೈಂನಲ್ಲಿ ಪ್ರದರ್ಶನ ಕಂಡ ಫ್ಯಾಮಿಲಿ ಮ್ಯಾನ್​ 2ನೇ ವೆಬ್​ ಸರಣಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಈ ವೆಬ್​ ಸರಣಿಯಲ್ಲಿ ದೆಹಲಿ ಮೂಲದ ನಟ ಶಾಹಬ್​ ಅಲಿ ಸಾಜಿದ್​ ಎಂಬ ಪಾತ್ರವನ್ನ ನಿರ್ವಹಿಸಿದ್ರು. ಈ ವೆಬ್​ ಸರಣಿ ಮೂಲಕ ಶಾಹಬ್​​ಗೆ ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ಅಕ್ಕಿನೇನಿ ಜೊತೆ ಮೊದಲ ಬಾರಿಗೆ ಸ್ಕ್ರೀನ್​ ಶೇರ್​ ಮಾಡುವ ಅವಕಾಶ ದೊರಕಿದೆ.

ಸಮಂತಾ ಅಕ್ಕಿನೇನಿ ಈ ವೆಬ್ ಸೀರಿಸ್​ನಲ್ಲಿ ರಾಜಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೀಗ ಈ ಎರಡು ಪಾತ್ರದ ಬಗ್ಗೆ ಶಾಹಬ್​ ಇಂಟರೆಸ್ಟಿಂಗ್​ ಮಾಹಿತಿಯೊಂದನ್ನ ಶೇರ್​ ಮಾಡಿದ್ದಾರೆ. ಈ ವೆಬ್​ ಸಿರೀಸ್​​ನಲ್ಲಿ ಸಾಜಿದ್​ ಹಾಗೂ ರಾಜಿ ನಡುವೆ ಪ್ರೇಮಾಂಕುರವಾದ ಕತೆ ಕೂಡ ಇದ್ದಿತ್ತು. ಆದರೆ ಫೈನಲ್​ ಟಚ್​ ನೀಡುವ ವೇಳೆ ಈ ಸನ್ನಿವೇಶಗಳನ್ನ ಡಿಲೀಟ್​ ಮಾಡಲಾಯ್ತು ಎಂದಿದ್ದಾರೆ.

ವೆಬ್​ ಸರಣಿಗಳಲ್ಲಿ ಈ ರೀತಿ ಆಗೋದು ಸರ್ವೇ ಸಾಮಾನ್ಯ. ಎಡಿಟಿಂಗ್​ ವೇಳೆ ಈ ರೀತಿ ಅನೇಕ ಸನ್ನಿವೇಶಗಳು ಕಟ್​ ಆಗುತ್ತವೆ. ಸಾಜಿದ್​ ಹಾಗೂ ರಾಜಿ ನಡುವೆ ಪ್ರೇಮ ಇರುವ ಕೆಲ ಸನ್ನಿವೇಶಗಳನ್ನ ಚಿತ್ರೀಕರಿಸಲಾಗಿತ್ತು. ಆದರೆ ಆ ದೃಶ್ಯಗಳು ಬಳಿಕ ಅಷ್ಟು ಮಹತ್ವದಲ್ಲ ಎನಿಸಿರಬಹುದು. ಹೀಗಾಗಿ ಅವುಗಳನ್ನ ಕಟ್​ ಮಾಡಿ ತೆಗೆಯಲಾಯಿತು. ಇದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.

ಸಮಂತಾ ಜೊತೆಗಿನ ಶೂಟಿಂಗ್​ ಅನುಭವವನ್ನೂ ಇದೇ ವೇಳೆ ಶೇರ್​ ಮಾಡಿದ ನಟ ಶಾಹಬ್​, ನನಗೆ ನಿರ್ದೇಶಕರಾದ ರಾಜ್​ ಹಾಗೂ ಡಿಕೆ ಸಮಂತಾ ಜೊತೆ ನಟನೆ ಮಾಡಬೇಕು ಎಂದು ಹೇಳಿದಾಗ ನಾನು ತುಂಬಾನೇ ಉತ್ಸುಕನಾಗಿದ್ದೆ. ಅವರು ದಕ್ಷಿಣ ಭಾರತದ ಹೆಸರಾಂತ ನಟಿ. ನಾನು ಮೊದಲು ತುಂಬಾನೇ ಗಾಬರಿಗೊಳಗಾಗಿದ್ದೆ. ಆದರೆ ಅವರೊಂದಿಗೆ ಮಾತನಾಡಿದ ಬಳಿಕ ನನಗೆ ಆ ಭಯ ಹೋಯ್ತು. ಅವರಿಂದ ನಾನು ತುಂಬಾನೇ ಕಲಿತೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...