alex Certify ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..!

ಫ್ಯಾಮಿಲಿ ಮ್ಯಾನ್​​​ ವೆಬ್​ ಸಿರೀಸ್​ಗಳ ಬಳಿಕ ಮನೋಜ್​ ಬಾಜಪೇಯಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್​ ಸೀಸನ್​ 1 ಹಾಗೂ ಸೀಸನ್​ 2 ಮೂಲಕ ಖ್ಯಾತಿ ಗಳಿಸಿದ ಮನೋಜ್​​ರನ್ನು ಒಟಿಟಿ ವೇದಿಕೆಯ ಸೂಪರ್​ ಸ್ಟಾರ್​ ಎಂದೇ ಬಿರುದು ನೀಡಲಾಗಿದೆ.

ಆದರೆ ಈ ಖ್ಯಾತಿಯನ್ನು ಮನೋಜ್​ ತಿರಸ್ಕರಿಸಿದ್ದಾರೆ. ನನ್ನನ್ನು ಸ್ಟಾರ್​ ಅಥವಾ ಸೂಪರ್​ ಸ್ಟಾರ್​​ ಎಂದು ಕರೆಯುವುದು ನನಗೆ ಮುಜುಗರ ಉಂಟುಮಾಡುತ್ತಿದೆ. ಈ ಬಿರುದನ್ನು ದಯಮಾಡಿ ಬೇರೆ ಯಾರಿಗಾದರೂ ನೀಡಿ. ಇಂತಹ ಬಿರುದುಗಳಿಗೆ ನಾನು ಯೋಗ್ಯ ಎಂದು ನನಗನಿಸುತ್ತಿಲ್ಲ. ಕೆಲಸದ ಮೇಲೆ ನಂಬಿಕೆ ಇಟ್ಟು ಮುಂದುವರಿಯುವವನು ನಾನು. ಈ ಬಿರುದುಗಳಿಂದ ನನಗೆ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ.

ವೃತ್ತಿ ಜೀವನದ ಏರಿಳಿತಳಿಗೆ ತಲೆ ಕೆಡಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಯಶಸ್ಸಿನ ಸೊಕ್ಕನ್ನು ಮೈಗೇರಿಸಿಕೊಂಡವನಲ್ಲ. ವೈಫಲ್ಯ ಉಂಟಾದಾಗ ಕುಗ್ಗಿದವನೂ ನಾನಲ್ಲ. ಹಣ ಗಳಿಸಲು ಅಥವಾ ಪ್ರಶಸ್ತಿ ಗೆಲ್ಲಲು ನಾನು ಈ ವೃತ್ತಿರಂಗಕ್ಕೆ ಬಂದಿಲ್ಲ. ನಾನು ನಟನೆಯನ್ನು ಪ್ರೀತಿಸುತ್ತಿದ್ದೇನೆ. ಇದೇ ಕಾರಣಕ್ಕೆ ನಾನು ಇಲ್ಲಿದ್ದೇನೆ ಎಂದು ಹೇಳಿದ್ರು.

ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವುದರಲ್ಲಿ ನನಗೆ ಆಸಕ್ತಿ ಹೆಚ್ಚಿದೆ. ಸಿನಿಮಾಗಳು ಚೆನ್ನಾಗಿ ಓಡಿದರೆ ಅದರಲ್ಲಿ ಖಂಡಿತವಾಗಿಯೂ ಲಾಭವಿದೆ. ಈ ಮಾತನ್ನು ನಾನು ನಿರಾಕರಿಸುವುದಿಲ್ಲ. ಅಥವಾ ಹಣಕ್ಕೆ ಯಾವುದೇ ಮಹತ್ವವಿಲ್ಲ ಎಂದೂ ನಾನು ಹೇಳುವುದಿಲ್ಲ. ಆದರೆ ಈ ರೀತಿಯ ಬಿರುದುಗಳು ನಿಜಕ್ಕೂ ನನಗೆ ಮುಜುಗರ ತರಿಸುತ್ತದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...