alex Certify ಬ‌ರೋಬ್ಬರಿ 1.9 ಲಕ್ಷ ರೂಪಾಯಿಗೆ ಹರಾಜಾಯ್ತು 40 ವರ್ಷಗಳ ಹಿಂದಿನ ಕೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ‌ರೋಬ್ಬರಿ 1.9 ಲಕ್ಷ ರೂಪಾಯಿಗೆ ಹರಾಜಾಯ್ತು 40 ವರ್ಷಗಳ ಹಿಂದಿನ ಕೇಕ್

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ರಸ್ತೆ ಅಪಘಾತದಲ್ಲಿ 25 ವರ್ಷಗಳ ಹಿಂದೆ ಮೃತಪಟ್ಟ ಬ್ರಿಟನ್ ಯುವರಾಣಿ ಡಯಾನಾ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ.

1981ರಲ್ಲಿ ಜರುಗಿದ್ದ ಪ್ರಿನ್ಸ್ ಚಾರ್ಲ್ಸ್ ಮತ್ತು ಲೇಡಿ ಡಯಾನಾ ಸ್ಪೆನ್ಸರ್‌‌ರ ವಿವಾಹ ಮಹೋತ್ಸವ ಕೇಕ್ ತುಂಡೊಂದು ಬರೋಬ್ಬರಿ 1,850 ಪೌಂಡ್ ($2,578) ಸಂಪಾದಿಸಿದೆ. 1996ರಲ್ಲಿ ಈ ದಂಪತಿ ಬೇರ್ಪಟ್ಟರೂ ಸಹ ಅವರ ಮದುವೆಯ ಕೇಕ್‌ಗೂ ಈಗಿನ ಕಾಲದಲ್ಲೂ ಭಾರೀ ಆಸಕ್ತಿ ಇದೆ…!

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ

ಲಂಡನ್‌ನಲ್ಲಿ ನಡೆಸಲಾದ ಈ ಹರಾಜಿನಲ್ಲಿ ಲೀಡ್ಸ್‌ನ ಗೆರ‍್ರಿ ಲೇಟನ್ ಅತಿ ಹೆಚ್ಚಿನ ಮೊತ್ತ ನೀಡಿ ಕೇಕ್ ತುಂಡನ್ನು ಖರೀದಿಸಿದ್ದಾರೆ.

40 ವರ್ಷಗಳಷ್ಟು ಹಳೆಯದಾದ ಈ ಕೇಕ್‌‌ನ ಕ್ರೀಂ ಐಸಿಂಗ್ ಮೇಲೆ ಬ್ರಿಟನ್ ರಾಜಮನೆತನದ ಲಾಂಛನವಿದೆ. ಹರಾಜಿನಲ್ಲಿ ಕೇಕ್‌ ಸ್ಲೈಸ್‌ನ ಆರಂಭಿಕ ಬೆಲೆ 300-500 ಪೌಂಡ್‌ಗಳಷ್ಟಿತ್ತು. ಕೊನೆಯಲ್ಲಿ ಈ ಮೊತ್ತದ ಮೂರರಷ್ಟಕ್ಕೆ ಕೇಕ್ ಸ್ಲೈಸ್ ಮಾರಾಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...