alex Certify ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ

75ನೇ ಸ್ವಾತಂತ್ರ‍್ಯೋತ್ಸವ ದಿನ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿರುವ ಓಲಾ ಎಲೆಕ್ಟ್ರಿಕ್, ಆಗಸ್ಟ್‌ 15, 2021ರಂದು ಬಿಡುಗಡೆಯಾಗಲಿರುವ ಎಲ್ಲಾ ಬಣ್ಣದ ಒಂದೊಂದು ಸ್ಕೂಟರ್‌ನ ಚಿತ್ರವೊಂದನ್ನು ಬಿಡುಗಡೆ ಮಾಡಿದೆ.

ಓಲಾ ಸಿಇಓ ಭವೀಶ್ ಅಗರ್ವಾಲ್‌ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಒಂಬತ್ತು ವಿವಿಧ ಬಣ್ಣಗಳ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ವಿವಿಧ ಹಂತಗಳಲ್ಲಿ ಪಾರ್ಕ್ ಮಾಡಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.

ಪೂರಿ-ಇಡ್ಲಿ ಜೊತೆ ಸಕತ್‌ ಟೇಸ್ಟಿ ಈ ಸಾಂಬಾರು

ಸದ್ಯದ ಮಟ್ಟಿಗೆ ಸ್ಕೂಟರ್‌ನ ಬೆಲೆಯನ್ನು ಓಲಾ ಬಹಿರಂಗ ಮಾಡದೇ ಇದ್ದರೂ ಸಹ 80,000 ರೂಪಾಯಿಯಿಂದ 1,10,000 ರೂ.ಗಳವರೆಗೆ ಬೆಲೆ ಇರಬಹುದು ಎಂಬ ನಿರೀಕ್ಷೆ ಬಲವಾಗಿದೆ.

ಒಮ್ಮೆ ಚಾರ್ಜ್ ಮಾಡಿದರೆ 150 ಕಿಮೀ ಚಲಿಸಬಲ್ಲ ಈ ಸ್ಕೂಟರ್‌ಗಳು, 18 ನಿಮಿಷಗಳ ಚಾರ್ಜ್‌‌ನಿಂದ 75 ಕಿಮೀ ಕ್ರಮಿಸಲಿವೆ ಎಂದು ಕಂಪನಿ ಈ ಹಿಂದೆ ತಿಳಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...