alex Certify ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ಧೈರ್ಯದಿಂದ ಎದುರಿಸಿತು ಈ ಪುಟ್ಟ ಹಕ್ಕಿ..! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಂಬಿನಿಂದ ತಿವಿಯಲು ಬಂದ ಹಸುಗಳನ್ನು ಧೈರ್ಯದಿಂದ ಎದುರಿಸಿತು ಈ ಪುಟ್ಟ ಹಕ್ಕಿ..! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಅವರು ಸ್ಪೂರ್ತಿದಾಯಕ, ಉಲ್ಲಾಸಭರಿತ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಸುಗಳು ಮತ್ತು ಗೂಳಿಗಳ ವಿರುದ್ಧ ಯಾವುದೇ ಅಳುಕಿಲ್ಲದೆ ಹೆಬ್ಬಾತು ಧೈರ್ಯದಿಂದ ನಿಂತು ಮುನ್ನುಗುತ್ತಿರುವ ಸ್ಪೂರ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಎಂಟು ಸೆಕೆಂಡುಗಳ ವಿಡಿಯೋದಲ್ಲಿ, ಹಸುಗಳು ಮತ್ತು ಗೂಳಿಗಳು ತಮ್ಮ ಕೊಂಬಿನಿಂದ ಹೆಬ್ಬಾತುವನ್ನು ತಿವಿಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಆದರೆ, ಹೆಬ್ಬಾತು ಮಾತ್ರ ಈ ದೊಡ್ಡ ಗಾತ್ರದ ಜೀವಿಗಳಿಗೆ ಕಿಂಚಿತ್ತೂ ಹೆದರಿದಂತೆ ಕಂಡು ಬಂದಿಲ್ಲ. ಓರ್ವ ಕುಸ್ತಿ ಪಟುವಿನಂತೆ, ತೊಡೆ ತಟ್ಟಿ ನಿಂತಿರುವಂತೆ ಹೆಬ್ಬಾತು ಮುನ್ನುಗುತ್ತಿದೆ. ಹಸುಗಳು ಈ ಪುಟ್ಟ ಹಕ್ಕಿಯಿಂದ ಕೆಲವೇ ಇಂಚುಗಳಷ್ಟು ಮಾತ್ರ ದೂರದಲ್ಲಿದೆ. ಆದರೂ, ಹೆಬ್ಬಾತು ಮಾತ್ರ ಬೃಹತ್ ಗಾತ್ರ ಜೀವಿಗಳಿಗೆ ಕ್ಯಾರೆ ಅಂದಿಲ್ಲ. ಹಸುಗಳು ಆಕ್ರಮಣಕಾರಿಯಾಗಿ ವರ್ತಿಸಿದರೂ ಕೂಡ ಪುಟ್ಟ ಹಕ್ಕಿ ಮೇಲೆ ದಾಳಿ ಮಾಡಿಲ್ಲ.

ಟ್ವಿಟ್ಟರ್‌ನಲ್ಲಿ ಸ್ಪೂರ್ತಿದಾಯಕ ವಿಷಯವನ್ನು ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ, ಜೋಶ್ ಹೇಗಿದೆ, ಹೈ ಸರ್….. ಎಂಬಂತಹ ಶೀರ್ಷಿಕೆಯನ್ನು ನೀಡಿದ್ದಾರೆ. ನೀವು ಎಷ್ಟೇ ಚಿಕ್ಕವರಾದರೂ ಕೂಡ, ಆತ್ಮವಿಶ್ವಾಸ, ಧೈರ್ಯವಿದ್ದಲ್ಲಿ ತಮ್ಮನ್ನೇನೂ ಮಾಡಲು ಆಗುವುದಿಲ್ಲ ಎಂಬುದಕ್ಕೆ ಈ ಪುಟ್ಟ ಹಕ್ಕಿಯಿಂದ ಕಲಿಯಬಹುದು.

— anand mahindra (@anandmahindra) February 21, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...