alex Certify ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹೆಚ್ಚಾಗ್ತಿದೆ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹೆಚ್ಚಾಗ್ತಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಖುಷಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ ಹೆಚ್ಚಳದ ನಂತ್ರ ಉದ್ಯೋಗಿಗಳ ವೇತನವನ್ನು ಮತ್ತೊಮ್ಮೆ ಹೆಚ್ಚಿಸುವ ಘೋಷಣೆ ಮಾಡಿದೆ. ಕೊರೊನಾ ರೋಗದಿಂದಾಗಿ ಮಕ್ಕಳ, ಶಿಕ್ಷಣ ಭತ್ಯೆಯನ್ನು ಇನ್ನೂ ಪಡೆಯದ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಈಗ ಅವಕಾಶ ನೀಡಿದೆ.

ಈ ಹಿಂದೆ, ಕೇಂದ್ರ ಸರ್ಕಾರಿ ನೌಕರರು, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು 2, 250 ರೂಪಾಯಿಗಳ ಸಿಇಎ ಪಡೆಯುತ್ತಿದ್ದರು. ಆದರೆ ಕೋವಿಡ್ -19 ರ ಕಾರಣದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಹಾಗಾಗಿ ಸರ್ಕಾರ ಸಿಇಎ ಸೌಲಭ್ಯ ನೀಡ್ತಿರಲಿಲ್ಲ. ಈಗ ಶಾಲೆಗಳು ಮತ್ತೆ ಪ್ರಾರಂಭವಾಗ್ತಿದೆ. ಹಾಗಾಗಿ ಸರ್ಕಾರ ಮತ್ತೆ ಸಿಇಎ ನೀಡಲು ನಿರ್ಧರಿಸಿದೆ.

ಸಿಇಎ ಲಾಭವನ್ನು, ಸ್ವಯಂ ಘೋಷಣೆ ಅಥವಾ ಎಸ್‌ಎಂಎಸ್, ಇ-ಮೇಲ್ ಮುದ್ರಣ, ಶುಲ್ಕ ಪಾವತಿ ಅಥವಾ ಫಲಿತಾಂಶದ ದಾಖಲೆ ಮೂಲಕ ಪಡೆಯಬಹುದು. ಈ ಸೌಲಭ್ಯವು ಮಾರ್ಚ್ 2020 ಮತ್ತು ಮಾರ್ಚ್ 2021 ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರ ಒಂದು ಮಗುವಿಗೆ 2,250 ರೂಪಾಯಿ ನೀಡುತ್ತದೆ. ಇಬ್ಬರು ಮಕ್ಕಳಿಗೆ ತಿಂಗಳಿಗೆ 4,500 ರೂಪಾಯಿ ನೀಡುತ್ತದೆ. ಎರಡನೇ ಮಗು ಅವಳಿ ಮಕ್ಕಳಾಗಿದ್ದರೆ, ಎರಡೂ ಮಕ್ಕಳ ಶಿಕ್ಷಣಕ್ಕೆ ಸಮಾನ ಭತ್ಯೆಯನ್ನು ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...