alex Certify ದೊಡ್ಡ ಬಿಳಿ ಶಾರ್ಕ್ ಅನ್ನು ಬೇಟೆಯಾಡಿ ಕೊಂದ ತಿಮಿಂಗಿಲಗಳು; ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಬಿಳಿ ಶಾರ್ಕ್ ಅನ್ನು ಬೇಟೆಯಾಡಿ ಕೊಂದ ತಿಮಿಂಗಿಲಗಳು; ಭಯಾನಕ ವಿಡಿಯೋ ವೈರಲ್

ಪ್ರಕೃತಿಯ ಕೆಲವು ವಿದ್ಯಮಾನಗಳು ನಿಮ್ಮನ್ನು ಮೋಡಿ ಮಾಡಬಹುದು. ಕೆಲವೊಂದು ಗಾಬರಿಗೊಳಿಸುತ್ತದೆ. ಬಲಿಷ್ಠವಾದ ಪ್ರಾಣಿಯು ದುರ್ಬಲ ಜಾತಿಯನ್ನು ಬೇಟೆಯಾಡುವುದನ್ನು ನೋಡುವುದು ಸಾಮಾನ್ಯವಾಗಿದ್ದರೂ, ಎರಡು ಸಮಾನ ಬಲಿಷ್ಠ ಪ್ರಾಣಿಗಳು ಪರಸ್ಪರ ಘರ್ಷಣೆಗೊಳ್ಳುವುದು ಬಹಳ ಅಪರೂಪ. ಇದೀಗ ಇಂಥದ್ದೇ ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್ ಆಗಿದೆ.

ಶಾರ್ಕ್ ಮೀನಂದ್ರೆ ಎಲ್ಲರೂ ಭಯಪಡುತ್ತಾರೆ. ಯಾಕಂದ್ರೆ ಇವುಗಳು ಪರಭಕ್ಷಕ ಜೀವಿಗಳಾಗಿವೆ. ಇದೀಗ ತಿಮಿಂಗಿಲ ಹಾಗೂ ಶಾರ್ಕ್ ನಡುವೆ ನಡೆದ ಮಹಾನ್ ಯುದ್ಧದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋವನ್ನು ಶಾರ್ಕ್ ವೀಕ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಹೌದು, ಡಿಸ್ಕವರಿ ಚಾನೆಲ್ ದೂರದರ್ಶನ ಸರಣಿಯಾದ ಶಾರ್ಕ್ ವೀಕ್‌ನಿಂದ ಈಗ ವೈರಲ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ಈ ಘಟನೆ ಸಂಭವಿಸಿದೆ. ದೊಡ್ಡ ಬಿಳಿ ಶಾರ್ಕ್ ಅನ್ನು ಓರ್ಕಾ ಬೇಟೆಯಾಡುವುದರೊಂದಿಗೆ ಭಯಾನಕ ದೃಶ್ಯಾವಳಿಗಳು ಪ್ರಾರಂಭವಾದವು. ಈ ವೇಳೆ ಮತ್ತೊಂದು ತಿಮಿಂಗಿಲ ಕಾಣಿಸಿಕೊಂಡಿದ್ದು, ಶಾರ್ಕ್ ಅನ್ನು ಸೀಳಿದೆ. ಈ ವೇಳೆ ಸಾಗರದಲ್ಲಿ ರಕ್ತದ ಕೊಳವು ರೂಪುಗೊಂಡಿದೆ. ಮೂರನೇ ಓರ್ಕಾ ಕೂಡ ಬೇಟೆಯಲ್ಲಿ ಸೇರಿಕೊಂಡಿದ್ದು, ಶಾರ್ಕ್ನ ಬಾಲವನ್ನು ಕಚ್ಚಿದೆ.

ಈ ವಿಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ನೆಟ್ಟಿಗರಿಂದ ಟನ್‌ನಷ್ಟು ದಿಗ್ಭ್ರಮೆಗೊಂಡ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕಾಮೆಂಟ್‌ಗಳ ವಿಭಾಗವು ವಿಭಿನ್ನ ಅಭಿಪ್ರಾಯಗಳಿಂದ ತುಂಬಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...