alex Certify Shocking: ರಷ್ಯಾ ಆಕ್ರಮಣದಿಂದ ನಿರಾಶ್ರಿತರಾದ ಉಕ್ರೇನಿಗರ ಸಂಖ್ಯೆ ಒಂದು ಕೋಟಿಗೂ ಅಧಿಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ರಷ್ಯಾ ಆಕ್ರಮಣದಿಂದ ನಿರಾಶ್ರಿತರಾದ ಉಕ್ರೇನಿಗರ ಸಂಖ್ಯೆ ಒಂದು ಕೋಟಿಗೂ ಅಧಿಕ…!

ರಷ್ಯಾ ಮಾಡುತ್ತಿರುವ ಯುದ್ಧದಿಂದಾಗಿ ಹತ್ತು ಮಿಲಿಯನ್ ಜನರು ಈಗ ಉಕ್ರೇನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ.

ಅಂದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚ ಜನ ಈಗ ಅತಂತ್ರರಾಗಿದ್ದಾರೆ. 10 ಮಿಲಿಯನ್ ಜನರು ದೇಶದೊಳಗೆ ಸ್ಥಳಾಂತರಗೊಂಡಿದ್ದಾರೆ, ಅಥವಾ ನಿರಾಶ್ರಿತರಾಗಿ ಇತರ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂಬ ಮಾಹಿತಿಯನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಕೇಂದ್ರದ ಮುಖ್ಯಸ್ಥರು ನೀಡಿದ್ದಾರೆ.

ನವೀನ್ ಅಂತಿಮ ದರ್ಶನಕ್ಕೆ ಜನ ಸಾಗರ, ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಫೆಬ್ರವರಿ 24ರಂದು ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ 3,389,044 ಉಕ್ರೇನಿಯನ್ನರು ದೇಶ ಬಿಟ್ಟು ನಿರ್ಗಮಿಸಿದ್ದಾರೆ. ಶನಿವಾರ ಇನ್ನೂ 60,352 ಜನರು ತೆರಳಲು ನೋಂದಾಯಿಸಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ಯು ಎನ್ ಎಚ್ ಸಿ ಆರ್ ಹೇಳಿದೆ.

ಪಲಾಯನ ಮಾಡಿದವರಲ್ಲಿ ಸುಮಾರು 90 ಪ್ರತಿಶತ ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. 18ರಿಂದ 60 ವರ್ಷ ವಯಸ್ಸಿನ ಉಕ್ರೇನಿಯನ್ ಪುರುಷರು ಮಿಲಿಟರಿಯ ಕರೆಗೆ ಅರ್ಹರಾಗಿದ್ದು ಮತ್ತು ದೇಶ ಬಿಡುವಂತಿಲ್ಲ ಎಂಬ ನಿಯಮವಿದೆ.

ಯುನಿಸೆಫ್ ಮಾಹಿತಿ ಪ್ರಕಾರ, ವಿದೇಶಕ್ಕೆ ಪಲಾಯನ ಮಾಡಿದವರಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳು ಸೇರಿದ್ದು, ಮಾನವ ಕಳ್ಳಸಾಗಣೆ ಮತ್ತು ಶೋಷಣೆಗೊಳಪಡುವ ಬಗ್ಗೆ ಎಚ್ಚರಿಸಿದೆ.

ಯುಎನ್ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಪ್ರಕಾರ ಬುಧವಾರದ ವೇಳೆಗೆ 1,62,000 ಪ್ರಜೆಗಳು ಉಕ್ರೇನ್‌ನಿಂದ ನೆರೆಯ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದಿದ್ದರೂ ಉಕ್ರೇನ್‌ನ ಗಡಿಯೊಳಗೆ ಉಳಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...