alex Certify ಚಾಲಕನಿಲ್ಲದೇ ಚಲಿಸಿದ ಟೆಂಪೋ ಟ್ರಾವೆಲರ್​​; ತಪ್ಪಿದ ಭಾರೀ ಅನಾಹುತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಲಕನಿಲ್ಲದೇ ಚಲಿಸಿದ ಟೆಂಪೋ ಟ್ರಾವೆಲರ್​​; ತಪ್ಪಿದ ಭಾರೀ ಅನಾಹುತ

ಇಳಿಜಾರಿನಲ್ಲಿ ಟೆಂಪೋ ಟ್ರಾವೆಲ್ಲರ್​ನ್ನು ನಿಲ್ಲಿಸಿದ್ದ ಪರಿಣಾಮ ಚಾಲಕನಿಲ್ಲದೆಯೇ ಟಿಟಿ ತನ್ನಿಂದ ತಾನಾಗಿಯೇ ಚಲಿಸಿದ ಘಟನೆಯೊಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತೊಣ್ಣೂರಿನ ಕೆರೆಯ ಬಳಿ ನಡೆದಿದೆ.

ಕೆರೆತೊಣ್ಣೂರಿಗೆ ಪ್ರವಾಸಿಗರನ್ನು ಹೊತ್ತು ಈ ಟೆಂಪೋ ಟ್ರಾವೆಲರ್​ ಬಂದಿತ್ತು. ಪ್ರವಾಸಿಗರೆಲ್ಲರೂ ಟಿಟಿಯಿಂದ ಇಳಿದ ಬಳಿಕ ಅದನ್ನು ನಿಲ್ಲಿಸಲಾಗಿತ್ತು. ಆದರೆ ತನ್ನಿಂದ ತಾನೇ ಇಳಿಜಾರಿನೆಡೆಗೆ ಚಲಿಸಿದ ಟೆಂಪೋ ಟ್ರಾವೆಲ್ಲರ್​ ಹಳ್ಳಕ್ಕೆ ನುಗ್ಗಿದೆ. ಅದೃಷ್ಟವಶಾತ್​ ಟಿಟಿಯಲ್ಲಿ ಯಾರೂ ಇಲ್ಲದ ಖಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಪಾಂಡವಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕ್ರೇನ್​ ಮೂಲಕ ಹಳ್ಳಕ್ಕೆ ಬಿದ್ದಿದ್ದ ಟೆಂಪೋ ಟ್ರಾವೆಲರ್​ನ್ನು ಮೇಲಕ್ಕೆ ಎತ್ತಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...