alex Certify ‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಟೆಲಿಗ್ರಾಂ’ ಬಳಕೆದಾರರಿಗೆ ಸಿಹಿ ಸುದ್ದಿ

Telegram Gets Group Video Calls Support, Animated Backgrounds and Emoji With New Update | Technology News

ಟೆಲಿಗ್ರಾಂ ಬಳಕೆದಾರರ ಬೇಡಿಕೆಯಂತೆ ಕೊನೆಗೂ ವಿಡಿಯೋ ಕಾಲ್​ ಸೌಲಭ್ಯವನ್ನ ಪರಿಚಯಿಸಿದೆ. ವಿಡಿಯೋ ಕಾಲ್​ ಸೌಲಭ್ಯವನ್ನ ತರಲಿದ್ದೇವೆ ಎಂದು ಕಂಪನಿ ಹೇಳಿದ 1 ವರ್ಷದ ಬಳಿಕ ಇದು ಬಳಕೆದಾರರಿಗೆ ಲಭ್ಯವಾಗಲಿದೆ. ಮೊಬೈಲ್​, ಟ್ಯಾಬ್ಲೆಟ್​, ಡೆಸ್ಕ್​ಟಾಪ್​ನಲ್ಲಿ ವಿಡಿಯೋ ಕಾಲ್​ ಸೌಲಭ್ಯವನ್ನ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆಯಲ್ಲಿ ಆನಿಮೇಟೆಡ್​​ ಬ್ಯಾಕ್​ಗ್ರೌಂಡ್​, ಮೆಸೇಜ್​​ ಸೆಂಡಿಂಗ್​ ಆನಿಮೇಷನ್​, ಹೊಸ ಆನಿಮೇಟೆಡ್​ ಇಮೋಜಿ ಸೇರಿದಂತೆ ಇನ್ನೂ ಹಲವು ಆಯ್ಕೆಗಳನ್ನ ಬಳಕೆದಾರರಿಗೆ ಪರಿಚಯಿಸಿದೆ.

ಲಸಿಕೆ ಪಡೆದವರಿಗೆ ಗುಡ್‌ ನ್ಯೂಸ್:‌ ಕೊರೊನಾದ ಎಲ್ಲಾ ರೂಪಾಂತರಿಗಳ ವಿರುದ್ಧ ಕೋವಿಶೀಲ್ಡ್ – ಕೊವ್ಯಾಕ್ಸಿನ್​ ಪರಿಣಾಮಕಾರಿ

ವಿಡಿಯೋ ಕಾಲ್​ನ ಜೊತೆಯಲ್ಲಿ ಟೆಲಿಗ್ರಾಂ ಇನ್ನೊಂದು ಮಹತ್ವದ ಸೌಲಭ್ಯವನ್ನ ನೀಡಿದೆ. ಇದರ ಪ್ರಕಾರ ಆಡಿಯೋ ಕಾಲ್​ಗಳನ್ನ ವಿಡಿಯೋ ಕಾಲ್​ಗಳಾಗಿ ಪರಿವರ್ತನೆ ಮಾಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು ಕ್ಯಾಮರಾ ಆಯ್ಕೆ ಮೇಲೆ ಕ್ಲಿಕ್​ ಮಾಡಬೇಕು. ಒಮ್ಮೆ ವಿಡಿಯೋ ಕಾಲ್​ ಆರಂಭವಾದ ಬಳಿಕ ಪರದೆಯ ಮೇಲೆ ಸದಸ್ಯರ ಮುಖ ಕಾಣಲಿದೆ. ಅಲ್ಲದೇ ಕ್ಯಾಮರಾ ಹಾಗೂ ಸ್ಕ್ರೀನ್​ ಎರಡನ್ನೂ ಒಮ್ಮೆಲೆ ತೋರಿಸಲು ಕೂಡ ಆಯ್ಕೆ ನೀಡಲಾಗಿದೆ.

ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​

ಇನ್ನು ಟ್ಯಾಬ್ಲೆಟ್​ ಹಾಗೂ ಡೆಸ್ಕ್​ ಟಾಪ್​ನಲ್ಲಿ ವಿಡಿಯೋ ಕಾಲ್​ ಮಾಡುವವರಿಗೆ ಇನ್ನೊಂದು ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಇಲ್ಲಿ ವಿಡಿಯೋ ಕಾಲ್​ ವೇಳೆ ಸ್ಪ್ಲಿಟ್​ ಸ್ಕ್ರೀನ್​ ಸೌಕರ್ಯ ಬಳಕೆ ಮಾಡಬಹುದು ಎಂದು ಟೆಲಿಗ್ರಾಂ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...