alex Certify ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​

ಆರೋಗ್ಯ ತಪಾಸಣೆಗೆಂದು ಅಮೆರಿಕದ ಮಯೋ ಕ್ಲಿನಿಕ್​ಗೆ ತೆರಳಿದ್ದ ಸೂಪರ್​ ಸ್ಟಾರ್​ ರಜನಿಕಾಂತ್​ ಅಲ್ಲಿಂದ ಹೊರಬಂದಿದ್ದಾರೆ. ರಜನಿಕಾಂತ್​ ಜೊತೆಯಲ್ಲಿ ಪುತ್ರಿ ಐಶ್ವರ್ಯಾ ಧನುಷ್​ ಸಹ ಇದ್ದಾರೆ. ನಟ ರಜನಿಕಾಂತ್​ ಹಾಗೂ ಅವರ ಪತ್ನಿ ಲತಾ ರಜನಿಕಾಂತ್​ ಜೊತೆ ದುಬೈ ಮಾರ್ಗವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು.

ನಿಯಮಿತ ಆರೋಗ್ಯ ತಪಾಸಣೆಗಾಗಿ ರಜನಿಕಾಂತ್​ ಮಯೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರಜನಿಕಾಂತ್​ 2016ರಲ್ಲಿ ಮೂತ್ರಪಿಂಡದ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದರು.

ಜೂನ್​ 19ರಂದು ರಜನಿಕಾಂತ್​ ದಂಪತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ವೈದ್ಯಕೀಯ ಕಾರಣಕ್ಕಾಗಿ ಅಮೆರಿಕಕ್ಕೆ ತೆರಳಲು ಸರ್ಕಾರದ ಬಳಿ ವಿಶೇಷ ಅನುಮತಿ ಪಡೆದಿದ್ದರು. ಇನ್ನು ಶೂಟಿಂಗ್​ ಕಾರಣಕ್ಕಾಗಿ ಧನುಷ್,​ ಅವರ ಪತ್ನಿ ಐಶ್ವರ್ಯ ಹಾಗೂ ಮಕ್ಕಳು ಸಹ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಈ ಕಾರಣಕ್ಕೆ ಪಾಕ್​​ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!

ಇತ್ತೀಚೆಗೆ ರಜನಿಕಾಂತ್​ ಹಾಗೂ ಅವರ ಪುತ್ರಿ ಐಶ್ವರ್ಯಾ ಅಮೆರಿಕದ ಮಯೋ ಕ್ಲಿನಿಕ್​​ನಿಂದ ಹೊರಬರುತ್ತಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದಂತೆಯೇ ಅಭಿಮಾನಿಗಳು ರಜನಿಕಾಂತ್​ರ ಆರೋಗ್ಯ ಕ್ಷೇಮವಾಗಿರಲಿ ಎಂದು ಹಾರೈಸಿದ್ದಾರೆ.

Rajinikanth and Aishwarya Dhanush make their way out of Mayo Clinic in the  US in new pic - Movies News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...