alex Certify ʼಪುಷ್ಪಾʼ ಸಿನಿಮಾದಿಂದ ಪ್ರೇರೇಪಿತರಾದ ತೆಲಂಗಾಣ ಟ್ರಾಫಿಕ್ ಪೊಲೀಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪುಷ್ಪಾʼ ಸಿನಿಮಾದಿಂದ ಪ್ರೇರೇಪಿತರಾದ ತೆಲಂಗಾಣ ಟ್ರಾಫಿಕ್ ಪೊಲೀಸ್…..!

Telangana Traffic Cop Cosplaying as Shekhawat IPS from 'Pushpa' Wins Heartsತೆಲಂಗಾಣದ ಟ್ರಾಫಿಕ್ ಪೊಲೀಸ್ ಒಬ್ಬರು ಪುಷ್ಪ ಚಿತ್ರದಲ್ಲಿ ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಅವರ ಗೆಟಪ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ.

ಶ್ರೀನಿವಾಸ್ ಅವರಿಗೆ ಸಿನಿಮಾಗಳೆಂದರೆ ಭಾರಿ ಒಲವು. ಸ್ಥಳೀಯರು ಅವರನ್ನು ಪ್ರೀತಿಯಿಂದ ಬುಲೆಟ್ ಶ್ರೀನು ಎಂದು ಕರೆಯುತ್ತಾರೆ. ಪುಷ್ಪ ಸಿನಿಮಾ ನೋಡಿದ ನಂತರ ಭನ್ವರ್ ಸಿಂಗ್ ಶೇಖಾವತ್ ಐಪಿಎಸ್ ಪಾತ್ರದ ಬಗ್ಗೆ ಅವರಿಗೆ ಆಸಕ್ತಿ ಮೂಡಿದೆ. ಈ ಹಿಂದೆ ಅವರು ಜನಪ್ರಿಯ ಸಿನಿಮಾ ಪಾತ್ರಗಳಿಗನುಗುಣವಾಗಿ ತಮ್ಮ ಉಡುಪನ್ನು ಕೂಡ ಬದಲಾಯಿಸಿಕೊಂಡಿದ್ದರು.

ತಮ್ಮ ತಲೆ ಬೋಳಿಸಿಕೊಂಡ ಅವರು ರೆಬಾನ್ ಸನ್ಗ್ಲಾಸ್ ಧರಿಸಿದ್ದಾರೆ. ಸಿನಿಮಾದಲ್ಲಿನ ಶೇಖಾವತ್ ಐಪಿಎಸ್ ಅಧಿಕಾರಿಯ ಪಾತ್ರದಂತೆ ತಮ್ಮ ಕರ್ತವ್ಯವನ್ನು ಮಾಡಲು ಪ್ರಾರಂಭಿಸಿದ್ದಾರೆ. ಇವರನ್ನು ನೋಡಿದ ಜನರು ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ.

ಪುಷ್ಪ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಐಪಿಎಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಪಾತ್ರವನ್ನು ನಿರ್ವಹಿಸಿದ್ದರು. ಇದರಿಂದ ಪ್ರೇರೇಪಿತರಾದ ಟ್ರಾಫಿಕ್ ಪೊಲೀಸ್ ತಾವು ಕೂಡ ಇದೇ ರೀತಿಯ ಗೆಟಪ್ ನಲ್ಲಿ ಕಾಣಿಸಿಕೊಂಡು ಜನಮನ ಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...